ನವದೆಹಲಿ, ಅ.01 (DaijiworldNews/PY): ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯ ಹರಾಜು ಪ್ರಕ್ರಿಯೆಯಲ್ಲಿ ಟಾಟಾ ಸನ್ಸ್ ಸಲ್ಲಿಸಿರುವ ಬಿಡ್ ಟಾಟಾ ಗ್ರೂಪ್ ಗೆದ್ದಿದೆ ಎನ್ನುವ ಮಾಧ್ಯಮದ ವರದಿಗಳನ್ನು ಸರ್ಕಾರ ನಿರಾಕರಿಸಿದೆ.
ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾವನ್ನು ಖರೀದಿ ಸಂಬಂಧ ನಡೆದ ಬಿಡ್ ಅಂತಿಮವಾಗಿ ಟಾಟಾ ಸನ್ಸ್ ಪಾಲಾಗಿದೆ. ಅಮಿತ್ ಶಾ ನೇತೃತ್ವದ ಸಮಿತಿಯ ಅನುಮೋದನೆಯ ಬಳಿಕ ಘೋಷಣೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಎಂದು ವರದಿಯಾಗಿತ್ತು.
ಈ ಬಗ್ಗೆ ಹೂಡಿಕೆ ಹಾಗೂ ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ ಟ್ವೀಟ್ ಮಾಡಿದ್ದು, "ಭಾರತ ಸರ್ಕಾರವು ಏರ್ ಇಂಡಿಯಾ ಷೇರು ಪ್ರಕರಣದಲ್ಲಿ ಹಣಕಾಸು ಬಿಡ್ಗಳ ಅನುಮೋದನೆ ಸೂಚಿಸಿದೆ ಎನ್ನುವ ಮಾಧ್ಯಮಗಳ ವರದಿ ತಪ್ಪು" ಎಂದಿದೆ.
ತಮ್ಮ ಖಾಸಗಿ ಸಾಮರ್ಥ್ಯದಲ್ಲಿ ಟಾಟಾ ಗ್ರೂಪ್ ಹಾಗೂ ಸ್ಪೈಸ್ ಜೆಟ್ ಅಧ್ಯಕ್ಷ ಅಜಯ್ ಸಿಂಗ್ ಸಾಲದ ಹೊರೆಯಿರುವ ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಏರ್ ಇಂಡಿಯಾಕ್ಕಾಗಿ ಈ ತಿಂಗಳ ಪ್ರಾರಂಭದಲ್ಲಿ ಬಿಡ್ ಮಾಡಿದ್ದರು. ಆದರೆ, ಕೊರೊನಾ ಕಾರಣದಿಂದ ಪೇರು ಮಾರಾಟ ಪ್ರಕ್ರಿಯೆ ವಿಳಂಬಗೊಂಡಿತ್ತು. ಸಾಲದ ಸುಳಿಯಲ್ಲಿರುವ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಳ್ಳಲು ನಾಲ್ಕು ಬಿಲ್ಡರ್ಗಳು ಸ್ಪರ್ಧಿಸಿದ್ದು, ಆದರೆ, ಅಜಯ್ ಸಿಂಗ್ ಅವರು ಮಾತ್ರವೇ ಅಂತಿಮ ಹಂತಕ್ಕೆ ಬಂದಿದ್ದರು.
ಏರ್ ಇಂಡಿಯಾವು 70,000 ಕೋಟಿಗೂ ಹೆಚ್ಚು ನಷ್ಟದಲ್ಲಿದೆ ಹಾಗೂ ಸರ್ಕಾರವು ಪ್ರತಿದಿನ ರಾಷ್ಟ್ರೀಯ ವಾಹಕವನ್ನು ನಡೆಸಲು 20 ಕೋಟಿ ಕಳೆದುಕೊಳ್ಳುತ್ತಿದೆ. 1990ರ ದಶಕದಲ್ಲಿ ಖಾಸಗಿ ವಿಮಾನಯಾನ ಸಂಸ್ಥೆಗಳ ಆಗಮನ ಹಾಗೂ 2000ರ ದಶಕದ ಮಧ್ಯ ಭಾಗದಲ್ಲಿ ವಿಮಾನಯಾನ ಸಂಸ್ಥೆಗಳ ಪ್ರವೇಶ ಏರ್ ಇಂಡಿಯಾವನ್ನು ನಷ್ಟದಲ್ಲಿ ಮುಳುಗುವಂತೆ ಮಾಡಿತ್ತು.