ಬೆಳಗಾವಿ, ಅ.01 (DaijiworldNews/HR): ಲಕ್ಷ್ಮಿ ಹೆಬ್ಬಾಳ್ಕರ್ ರಾತ್ರಿ ರಾಜಕಾರಣದಿಂದ ಗೆದ್ದು ಶಾಸಕಿಯಾಗಿದ್ದಾರೆ ಎಂದು ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ಶಾಸಕ ಸಂಜಯ್ ಪಾಟೀಲ್ ವಿರುದ್ಧ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.
ಸಂಜಯ್ ಪಾಟೀಲ್ ಅವರ ನೈಟ್ ಪಾಲಿಟಿಕ್ಸ್ ಹೇಳಿಕೆ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಶಾಸಕಿ ಲಕ್ಷ್ಮಿ, "ಸಂಜಯ್ ಅಣ್ಣ ನಿನಗೆ ಹೆಂಡತಿ ಇದ್ದಾಳೆ, ಮಗಳಿದ್ದಾಳೆ, ತಾಯಿ, ಸಹೋದರಿಯರೂ ಇದ್ದಾರೆ. ಹೀಗಾಗಿ ಇಂಥ ಹೇಳಿಕೆ ನೀಡಿರುವ ನೀನು ಯಾರ ಬಗ್ಗೆ ಹೇಳಿಕೆ ನೀಡಿದೆ ಎಂಬುದನ್ನು ನಿಮ್ಮನ್ನೇ ನೀವು ವಿಮರ್ಶೆ ಮಾಡಿಕೊಳ್ಳಿ" ಎಂದು ತಿರುಗೇಟು ನೀಡಿದರು.
ಇನ್ನು "ನಾನು ಯಾರ ಮೇಲೂ ಚಾಲೇಂಜ್ ಮಾಡಲ್ಲ, ಹಾಗಂತ ಸುಮ್ಮನೇ ಕುಳಿತುಕೊಳ್ಳುವವಳೂ ಅಲ್ಲ. ನಾನು ಜನರ ಆಶಿರ್ವಾದದಿಂದ ಗೆದ್ದು ಶಾಸಕಿಯಾಗಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದೇನೆ. ಮುಂದೆ ಜನ ಬೆಂಬಲವಿದ್ದರೆ ಸಚಿವೆಯೂ ಆಗುತ್ತೇನೆ" ಎಂದು ಹೇಳಿದ್ದಾರೆ.