ಭೋಪಾಲ್, ಅ.01 (DaijiworldNews/PY): ಮಾತು ಬಾರದ, ಕಿವಿ ಕೇಳದ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ಆರು ಮಂದಿ ಗ್ಯಾಂಗ್ ರೇಪ್ ನಡೆಸಿದ ಘಟನೆ ಮಧ್ಯಪ್ರದೇಶದ ಶಾಡೊಲ್ ಎಂಬಲ್ಲಿ ನಡೆದಿದೆ.
ನಾಲ್ಕು ಮಂದಿ ಅಪ್ರಾಪ್ತ ವಯಸ್ಕರು ಸೇರಿ ಆರು ಮಂದಿ ಯುವಕರು ಬಾಲಕಿಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರ ಎಸಗಿದ್ದು, ಮೊಬೈಲ್ನಲ್ಲಿ ಚಿತ್ರೀಕರಿಸಿ ಹಂಚಿಕೊಂಡಿದ್ದಾರೆ.
ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಸಂತ್ರಸ್ತ ಬಾಲಕಿಯ ತಂದೆಯ ಮೊಬೈಲ್ಗೆ ಸ್ಥಳೀಯವಾಗಿ ಹರಿದಾಡುತ್ತಿದ್ದ ಫೋಟೋಗಳು ಬಂದಿವೆ. ಈ ಸಂದರ್ಭ ಮಗಳ ಮೇಲಾದ ದೌರ್ಜನ್ಯದ ಬಗ್ಗೆ ತಿಳಿದುಬಂದಿದೆ.
ಬಾಲಕಿಯ ತಾಯಿ ಕೂಡಲೇ ಈ ಬಗ್ಗೆ ಪ್ರಕರಣ ದಾಖಲಿಸಿದ್ದು. ಪೊಲೀಸರು ಕಾರ್ಯಾಚರಣೆ ನಡೆಸಿ ಎಲ್ಲಾ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಯ ಬಗ್ಗೆ ಪರಿಣಿತರು ಬಾಲಕಿಯನ್ನು ಕೇಳಿದ್ದು, ಬಾಲಕಿ ಕೈ ಸನ್ನೆ ಮೂಲಕ ತನ್ನ ಮೇಲಾದ ಕೃತ್ಯವನ್ನು ತಿಳಿಸಿದ್ದು, ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ.