ಚಿಕ್ಕಮಗಳೂರು, ಅ.01 (DaijiworldNews/HR): ದೇಶದಲ್ಲಿ ಇಡೀ ಬಿಜೆಪಿಯ ತಂಡ ಒಟ್ಟಾಗಿ ಸೇರಿ ಮುಂದಿನ ಉಪ ಚುನಾವಣೆಯನ್ನು ಎದುರಿಸಿ ನಾವೇ ಗೆಲ್ಲುತ್ತೇವೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಆಡಳಿತಾತ್ಮಕ ವಿಚಾರವಾಗಿ ನಮಗೆ ಮಾರ್ಗದರ್ಶನ ನೀಡುತ್ತಾರೆ. ನಮ್ಮ ಹಿರಿಯರಾದ ಬಿ .ಎಸ್ ಯಡಿಯೂರಪ್ಪನವರು ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರನ್ನೂ ಒಳಗೊಂಡಂತೆ ನಾವು ಒಟ್ಟಾಗಿ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ" ಎಂದರು.
ಇನ್ನು ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಶೈಲಿಯನ್ನು ಗಮನದಲ್ಲಿಟ್ಟುಕೊಂಡು, ದೇಶದ ಇಡೀ ಬಿಜೆಪಿಯ ತಂಡ ಒಟ್ಟಾಗಿ ಸೇರಿ ಮುಂದಿನ ಉಪ ಚುನಾವಣೆಯನ್ನು ಎದುರಿಸುತ್ತೇವೆ" ಎಂದಿದ್ದಾರೆ.
ಇದೇ ವೇಳೆ ದತ್ತಪೀಠದ ಕುರಿತಾಗಿ ಮಾತನಾಡಿದ ಅವರು, "ನ್ಯಾಯಾಲಯ ನೀಡಿರುವ ಮಾರ್ಗಸೂಚಿಯ ಅನ್ವಯ ಸರ್ಕಾರ ಸರಿಯಾದ ನಿರ್ಧಾರವನ್ನು ಕೈಗೊಳ್ಳಲಿದೆ" ಎಂದು ಹೇಳಿದ್ದಾರೆ.