ಬೆಂಗಳೂರು, ಅ.01 (DaijiworldNews/PY): "ಚುನಾವಣೆ ಯಾವಾಗ ನಡೆದರೂ ಬಿಜೆಪಿ ಪಕ್ಷ ತಯಾರಾಗಿದೆ. ನಮ್ಮ ಪಕ್ಷ ಚುನಾವಣೆಗೆ ಹೆದರುವುದಿಲ್ಲ" ಎಂದು ಸಚಿವ ಭೈರತಿ ಬಸವರಾಜ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಬಿಬಿಎಂಪಿ ಚುನಾವಣೆ ನಡೆಸಲು ನಮ್ಮದು ಯಾವುದೇ ರೀತಿಯಾದ ಅಭ್ಯಂತರವಿಲ್ಲ" ಎಂದಿದ್ದಾರೆ.
"ಹೊರಮಾವು ವಾರ್ಡ್ 25ರಲ್ಲಿ ಒಂದೂವರೆ ಲಕ್ಷ ಜನರಿದ್ದರು. ಇಷ್ಟು ಮಂದಿಗೆ ಒಂದೆಡೆ ಇದ್ದಲ್ಲಿ ಚುನಾವಣೆ ನಡೆಸುವುದಾರೂ ಹೇಗೆ?. ಈ ಹಿನ್ನೆಲೆ ಡಿ-ಲಿಮಿಟೇಷನ್ ಮಾಡಲು ಮುಂದಾಗಿದೆ. ಈ ವಿಚಾರವಾಗಿ ನಾನು ಸಿಎಂ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಾತನಾಡಿದ್ದೇನೆ" ಎಂದು ಹೇಳಿದ್ದಾರೆ.
"ಯಾವುದೇ ಪ್ರದೇಶದಲ್ಲಿ ರಸ್ತೆ ಸಮಸ್ಯೆಗಳಿದ್ದಲ್ಲಿ ಅದನ್ನು ನನ್ನ ಗಮನಕ್ಕೆ ತನ್ನಿ. ಜನರ ಋಣ ತೀರಿಸುವ ಕಾರ್ಯವನ್ನು ನಾವು ಮಾಡುತ್ತೇವೆ" ಎಂದಿದ್ದಾರೆ.
ಮೆಟ್ರೋ ಸ್ಟೇಷನ್ಗೆ ಶಂಕರ್ನಾಗ್ ಹೆಸರಿಡುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಕನ್ನಡ ಚಿತ್ರರಂಗಕ್ಕೆ ಶಂಕರ್ನಾಗ್ ಅವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಯಾವುದಾದರೂ ಒಂದು ಮೆಟ್ರೋ ನಿಲ್ದಾಣಕ್ಕೆ ಶಂಕರ್ನಾಗ್ ಹೆಸರಿಡಲು ಮನವಿ ಮಾಡುತ್ತೇವೆ. ಈ ವಿಚಾರವಾಗಿ ಸಿಎಂ ಅವರೊಂದಿಗೆ ಚರ್ಚಿಸುತ್ತೇವೆ" ಎಂದು ಹೇಳಿದ್ದಾರೆ.