ಬೆಂಗಳೂರು, ಅ.01 (DaijiworldNews/HR): ಭಾರತ ಬಡವಾಗಿದೆ, ಮೋದಿ ಗೆಳೆಯರು ಸಿರಿವಂತರಾಗಿದ್ದಾರೆ. ಭಾರತದ ಆಸ್ತಿ ಮಾರಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್(ಆರ್ಐಎಲ್) ಅಧ್ಯಕ್ಷ ಮುಕೇಶ್ ಅಂಬಾನಿ ಅವರು ಭಾರತದ ಅತ್ಯಂತ ಸಿರಿವಂತ ವ್ಯಕ್ತಿಯಾಗಿ, ಉದ್ಯಮಿ ಗೌತಮ್ ಅದಾನಿ 2ನೇ ಸ್ಥಾನ ಪಡೆದ ಬಗ್ಗೆ ಪ್ರತಿಕ್ರಿಯಿಸಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಭಾರತ ಬಡವಾಗಿದೆ, ಮೋದಿ ಗೆಳೆಯರು ಸಿರಿವಂತರಾಗಿದ್ದಾರೆ. ಭಾರತದ ಆಸ್ತಿ ಮಾರಲಾಗುತ್ತಿದೆ, ಮೋದಿ ಗೆಳೆಯರ ಆಸ್ತಿ ಬೆಳೆಯುತ್ತಿದೆ. ಬಡವಾದ ಭಾರತವನ್ನ ಅದಾನಿ, ಅಂಬಾನಿಗೆ ಅಡ ಇಡಲಾಗುತ್ತಿದೆ!" ಎಂದಿದೆ.
ಇನ್ನು ಜನತೆ ಬಡವರಾಗಿರುವುದಷ್ಟೇ ಅಲ್ಲ, ಸರ್ಕಾರದ ಖಜಾನೆಯೂ ಖಾಲಿ, ಆದರೆ ಉದ್ಯಮಿಗಳು ಹೇಗೆ ಬೆಳೆದರು ಎಂದು ಜನತೆ ಯೋಚಿಸಿದರೆ ಮೋದಿಯವರ ಆಡಳಿತ ಅರ್ಥವಾಗಲಿದೆ" ಎಂದು ಹೇಳಿದೆ.
ಅದಾನಿ ಪ್ರತಿದಿನ 1 ಸಾವಿರ ಕೋಟಿ ಆದಾಯ ಗಳಿಸುತ್ತಿದ್ದಾರೆ ಎಂದು ಹುರೂನ್ ಇಂಡಿಯಾ ಸಿದ್ಧಪಡಿಸುವ 'ಐಐಎಫ್ಎಲ್ ವೆಲ್ತ್ ಹುರೂನ್ ಇಂಡಿಯಾ ರಿಚ್ ಲಿಸ್ಟ್ - 2021 ಬಿಡುಗಡೆ ಮಾಡಿದ ವರದಿಯಲ್ಲಿ ಮಾಹಿತಿ ನೀಡಿದ್ದು, 10 ವರ್ಷಗಳ ಹಿಂದೆ ಈ ಪಟ್ಟಿಯಲ್ಲಿ ಸ್ಥಾನ ಪಡೆದವರ ಸಂಖ್ಯೆ 100ಕ್ಕಿಂತ ಕಡಿಮೆ ಇತ್ತು. ಈಗ ಅದು ಸಾವಿರಕ್ಕೆ ತಲುಪಿದೆ. ಪರಿಸ್ಥಿತಿ ಹೀಗೆ ಮುಂದುವರಿದರೆ 5 ವರ್ಷಗಳಲ್ಲಿ 2 ಸಾವಿರ ವ್ಯಕ್ತಿಗಳ ಹೆಸರು ಈ ಪಟ್ಟಿ ಸೇರಲಿವೆ ಎಂದು ಹುರೂನ್ ಇಂಡಿಯಾ ಸಂಸ್ಥೆಯ ಮುಖ್ಯ ಸಂಶೋಧಕ ಅನಸ್ ರೆಹ್ಮಾನ್ ಜುನೈದ್ ಹೇಳಿದ್ದರು.