ನವದೆಹಲಿ, ಅ 01 (DaijiworldNews/MS): ರಾಷ್ಟ್ರೀಯ ವಿಮಾನಯಾನ ಏರ್ ಇಂಡಿಯಾವನ್ನು ಖರೀದಿ ಸಂಬಂಧ ನಡೆದ ಬಿಡ್ ಅಂತಿಮವಾಗಿ ಟಾಟಾ ಸನ್ಸ್ ಪಾಲಾಗಿದೆ. ಅಮಿತ್ ಶಾ ನೇತೃತ್ವದ ಸಮಿತಿಯ ಅನುಮೋದನೆಯ ಬಳಿಕ ಘೋಷಣೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.
ಸರ್ಕಾರಿ ಮೂಲಗಳ ಪ್ರಕಾರ, ರಾಷ್ಟ್ರೀಯ ವಾಹಕ ಏರ್ ಇಂಡಿಯಾವನ್ನು ಸ್ವಾಧೀನಪಡಿಸಿಕೊಳ್ಳುವ ಅಂತಿಮ ಬಿಡ್ ಅನ್ನು ಟಾಟಾ ಸನ್ಸ್ ಗೆದ್ದಿದೆ. ಸಾಲ್ಟ್-ಟು-ಸಾಫ್ಟ್ ವೇರ್ ಸಮೂಹವು ಸೆಪ್ಟೆಂಬರ್ 15 ರಂದು ವಿಮಾನಯಾನಕ್ಕಾಗಿ ಅಂತಿಮ ಬಿಡ್ ಸಲ್ಲಿಸಿತ್ತು. ಸ್ಪೈಸ್ ಜೆಟ್ ಪ್ರವರ್ತಕ ಅಜಯ್ ಸಿಂಗ್ ಕೂಡ ಬಿಡ್ ನಲ್ಲಿ ಪಾಲ್ಗೊಂಡಿದ್ದರು.
ಏರ್ ಇಂಡಿಯಾ ಈ ಹಿಂದೆ ಟಾಟಾ ಗ್ರೂಪ್ ಕಂಪನಿಯಾಗಿತ್ತು. ಈ ಕಂಪನಿಯನ್ನು ಜೆಆರ್ ಡಿ ಟಾಟಾ 1932 ರಲ್ಲಿ ಸ್ಥಾಪಿಸಿತು. ಸ್ವಾತಂತ್ರ್ಯಾನಂತರ, ವಾಯುಯಾನ ವಲಯವನ್ನು ರಾಷ್ಟ್ರೀಕರಣಗೊಳಿಸಲಾಯಿತು
ಗೃಹ ಸಚಿವ ಅಮಿತ್ ಶಾ ನೇತೃತ್ವದ ರಾಷ್ಟ್ರೀಯ ವಾಹಕ ಬಂಡವಾಳ ಹೂಡಿಕೆಯ ಮಂತ್ರಿಗಳ ಸಮಿತಿಯು ಶೀಘ್ರದಲ್ಲೇ ಸಭೆ ಸೇರಲಿದ್ದು ಈ ಸಮಿತಿಯ ಅನುಮೋದನೆಯ ನಂತರವೇ ಔಪಚಾರಿಕ ಘೋಷಣೆಯನ್ನು ಮಾಡಲಾಗುವುದು. ಇನ್ನೊಂದು ಗಮನಿಸಬೇಕಾದ ಸಮಿತಿ ಅನುಮೋದನೆ ಬಳಿಕ ಏರ್ ಇಂಡಿಯಾ ಟಾಟಾ ಗ್ರ್ರೂಪ್ ನ ಕೈ ಸೇರಿದರೆ 67 ವರ್ಷಗಳ ನಂತರ ಟಾಟಾ ಬ್ರಾಂಡ್ಗೆ ಏರ್ ಇಂಡಿಯಾ ಮರಳಿದಂತಾಗುತ್ತದೆ.
ವಾಯುಯಾನ ವಲಯವನ್ನು ರಾಷ್ಟ್ರೀಕರಣಗೊಳಿಸಿದ ಬಳಿಕ ಜುಲೈ 29, 1946 ರಂದು ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಲಾಯಿತು. 1953 ರಲ್ಲಿ, ಸರ್ಕಾರವು ಏರ್ ಕಾರ್ಪೊರೇಷನ್ ಕಾಯ್ದೆಯನ್ನು ಅಂಗೀಕರಿಸಿತು ಮತ್ತು ಕಂಪನಿಯ ಸ್ಥಾಪಕ ಜೆಆರ್ ಡಿ ಟಾಟಾ ಅವರಿಂದ ಮಾಲೀಕತ್ವದ ಹಕ್ಕುಗಳನ್ನು ಖರೀದಿಸಿತು. ನಂತರ ಈ ಕಂಪನಿಯನ್ನು ಏರ್ ಇಂಡಿಯಾ ಇಂಟರ್ ನ್ಯಾಷನಲ್ ಲಿಮಿಟೆಡ್ ಎಂದು ಮರುನಾಮಕರಣ ಮಾಡಲಾಗಿತ್ತು.