ಹುಬ್ಬಳ್ಳಿ, ಅ.01 (DaijiworldNews/PY): "ಜಾತಿಗಣತಿ ವರದಿ ಸಿದ್ದವಾಗಿರುವುದು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಗೊತ್ತಿದ್ದು, ಇನ್ನೂ ತಯಾರಿಯಾಗಿಲ್ಲ ಎಂದು ಸುಳ್ಳು ಹೇಳುತ್ತಾ ಬಂದಿದ್ದಾರೆ ಸುಳ್ಳು ಹೇಳುವುದರಲ್ಲಿ ಸಿದ್ದರಾಮಯ್ಯ ನಿಸ್ಸೀಮರು" ಎಂದು ಶಾಸಕ ಜಗದೀಶ್ ಶೆಟ್ಟರ್ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನಡೆಸಿದ ಜಾತಿಗಣತಿಯ ವರದಿಯು 15-05-2015 ರಲ್ಲಿಯೇ ಸಿದ್ದವಾಗಿದೆ. ಸಿದ್ದರಾಮಯ್ಯ ಏಕೆ ಇದನ್ನು ಬಿಡುಗಡೆ ಮಾಡಿಲ್ಲ. ಇವಾಗ ಇದನ್ನು ಬಿಡುಗಡೆ ಮಾಡಬೇಕು ಎಂದಿ ಏಕೆ ಒತ್ತಾಯ ಮಾಡುತ್ತಿದ್ದಾರೆ?" ಎಂದು ಪ್ರಶ್ನಿಸಿದ್ದಾರೆ.
"ಅದನ್ನು ಬೇರೆಯವರ ತಲೆಗೆ ಕಟ್ಟಲು ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದ್ದಾಗ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಏಕೆ ಬಿಡುಗಡೆ ಮಾಡಲಿಲ್ಲ ಎಂದು ಆರೋಪಿಸಿರುವ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಸರ್ಕಾರೇ ಬೆಂಬಲ ಮಾಡಿದ್ದ ಕಾಂಗ್ರೆಸ್ ಏಕೆ ಸುಮ್ಮನೆ ಕುಳಿತಿತ್ತು. ಆದರೆ, ಇದೀಗ ಈ ವಿಚಾರವನ್ನು ಏಕೆ ಪ್ರಸ್ತಾಪ ಮಾಡುತ್ತಿದ್ದಾರೆ?. ಒಬ್ಬರ ಮೇಲೆ ಒಬ್ಬರು ಏಕೆ ಗೂಬೆ ಕೂರಿಸುತ್ತಿದ್ದಾರೆ?" ಎಂದು ಕೇಳಿದ್ದಾರೆ.
"ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದ ಚಾಂಪಿಯನ್ ಆಗಲು ಹೊರಟಿದ್ದಾರೆ. ಅವರು ಹಿಂದುಳಿದ ವರ್ಗಗಳ ಜನರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ಧಾರೆ. ಅವರದ್ದು ಬೇಜವಾಬ್ದಾರಿಯ ಪರಮಾವಧಿ" ಎಂದಿದ್ದಾರೆ.