ಕಲಬುರಗಿ, ಅ.01 (DaijiworldNews/HR): ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ದಸ್ತಾಪುರ ಗ್ರಾಮದಲ್ಲಿ ಕಲುಷಿತ ನೀರು ಕುಡಿದು ವಾಂತಿ, ಭೇದಿಯಾಗಿ ಇಬ್ಬರು ಮೃತಪಟ್ಟು, 40ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡ ಘಟನೆ ನಡೆದಿದೆ.
ಸಾಂದರ್ಭಿಕ ಚಿತ್ರ
ಮೃತಪಟ್ಟವರನ್ನು ಕಮಲಾಬಾಯಿ ಕೊಬ್ರೆ (48) ಹಾಗೂ ನಾಗೂರು ಗ್ರಾಮದ ದ್ರೌಪದಿ (55) ಎಂದು ಗುರುತಿಸಲಾಗಿದೆ.
ಕಲುಷಿತ ನೀರು ಕುಡಿದು ಕಳೆದ 15 ದಿನಗಳಿಂದ ಗ್ರಾಮದ ಜನರಲ್ಲಿ ವಾಂತಿ ಬೇಧಿ ಉಲ್ಬಣಗೊಂಡಿದ್ದು, ಮಕ್ಕಳು, ಮಹಿಳೆಯರು ಸೇರಿ 40ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡಿದ್ದಾರೆ.
ಇನ್ನು ಘಟನೆ ಬಳಿಕ ಶುದ್ಧ ಕುಡಿಯುವ ನೀರು ನೀಡದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.