ನವದೆಹಲಿ, ಅ 01 (DaijiworldNews/MS): ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) 'ಭಗವದ್ಗೀತಾ'ವನ್ನು ಭಾರತದ ರಾಷ್ಟ್ರೀಯ ಗ್ರಂಥ ಎಂದು ಘೋಷಿಸಲು ಮತ್ತು ದೇಶದ ಎಲ್ಲ ಹಂತಗಳ ಶಿಕ್ಷಣದಲ್ಲಿ ಅದರ ಬೋಧನೆ-ಕಲಿಕೆಯನ್ನು ವನ್ನು ಕಡ್ಡಾಯಗೊಳಿಸಬೇಕು ಎಂದು ಆಗ್ರಹಿಸಿದೆ.
" ನೈತಿಕ ಮೌಲ್ಯಗಳ ಕುಸಿತ ತಡೆಯಲು" ಹಾಗೂ "ನೈತಿಕ ಮೌಲ್ಯಗಳ ನಿರಂತರ ಕುಸಿತ" ದಿಂದಾಗಿ ಅಧಿಕಾರಿಗಳಲ್ಲಿ ಮೌಲ್ಯಗಳನ್ನು ಮತ್ತು ಪ್ರಬಲವಾಗಿ ಕರ್ತವ್ಯ ಪ್ರಜ್ಞೆಯನ್ನು ಜಾಗೃತಗೊಳಿಲು ಸರ್ಕಾರಿ ಸಂಸ್ಥೆಗಳಲ್ಲಿ ಧರ್ಮಗ್ರಂಥವನ್ನು ಓದುವ ಕಾರ್ಯಕ್ರಮಗಳನ್ನು ನಿರಂತವಾಗಿ ಆಯೋಜಿಸಬೇಕೆಂದು ವಿಎಚ್ಪಿ ಒತ್ತಾಯಿಸಿತು.
ನಮ್ಮಲಿರುವ ತಪ್ಪು ಶಿಕ್ಷಣ ವ್ಯವಸ್ಥೆಯಿಂದಾಗಿ ನೈತಿಕ ಮೌಲ್ಯಗಳ ಕುಸಿತವಾಗುತ್ತಿದೆ . ಮೌಲ್ಯಗಳ ಕುಸಿತ ತಡೆಯಲು ಸರ್ಕಾರವು ಎಲ್ಲಾ ಹಂತಗಳಲ್ಲೂ ಶ್ರೀಮದ್ ಭಗವದ್ಗೀತೆಯ ಬೋಧನೆ-ಕಲಿಕೆಯನ್ನು ಕಡ್ಡಾಯಗೊಳಿಸಬೇಕು .ಮಾತ್ರವಲ್ಲದೆ ಇದು ಪಠ್ಯಕ್ರಮದ ಭಾಗವಾಗಬೇಕು" ಎಂದು ವಿಎಚ್ಪಿ ರಾಷ್ಟ್ರೀಯ ಕಾರ್ಯದರ್ಶಿ ಆಚಾರ್ಯ ರಾಧಾ ಕೃಷ್ಣ ಮನೋಡಿ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದ್ದಾರೆ.
ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಶಿಕ್ಷಕರೂ ಭಗವದ್ಗೀತೆಯನ್ನು ಅಧ್ಯಯನ ಮಾಡುವಂತೆ ಮಾಡಬೇಕು. ಭಗವದ್ಗೀತೆಯ ಎಲ್ಲ 18 ಅಧ್ಯಾಯಗಳ ಬೋಧನೆ ಹಾಗೂ ಕಲಿಕೆಯನ್ನು ಶಿಕ್ಷಕರ ತರಬೇತಿ ಪಠ್ಯಕ್ರಮದ ಒಂದು ಭಾಗವಾಗಿ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಮತ್ತು ಕರ್ತವ್ಯಪ್ರಜ್ಞೆಯನ್ನು ಬೆಳಸಬಹುದಾಗಿದೆಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಶಿಕ್ಷಕರೂ ಭಗವದ್ಗೀತೆಯನ್ನು ಅಧ್ಯಯನ ಮಾಡುವಂತೆ ಮಾಡಬೇಕು. ಭಗವದ್ಗೀತೆಯ ಎಲ್ಲ 18 ಅಧ್ಯಾಯಗಳ ಬೋಧನೆ ಹಾಗೂ ಕಲಿಕೆಯನ್ನು ಶಿಕ್ಷಕರ ತರಬೇತಿ ಪಠ್ಯಕ್ರಮದ ಒಂದು ಭಾಗವಾಗಿ ಮಾಡಬೇಕು. ಇದರಿಂದ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯಗಳನ್ನು ಮತ್ತು ಕರ್ತವ್ಯಪ್ರಜ್ಞೆಯನ್ನು ಬೆಳಸಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳಲ್ಲಿ ಮೌಲ್ಯಗಳನ್ನು ಮತ್ತು ಬಲವಾದ ಕರ್ತವ್ಯ ಪ್ರಜ್ಞೆಯನ್ನು ಉತ್ತೇಜಿಸಲು, ಪ್ರತಿ ಹದಿನೈದು ದಿನಗಳಿಗೊಮ್ಮೆ ಸರ್ಕಾರಿ ಸಂಸ್ಥೆಗಳಲ್ಲಿ ಭಗವದ್ಗೀತೆಯನ್ನು ಓದುವ ಕಾರ್ಯಕ್ರಮಗಳನ್ನು ಆಯೋಜಿಸಬೇಕು