ಶಿವಮೊಗ್ಗ, ಸೆ.30 (DaijiworldNews/PY): "ರಾಜ್ಯ ರಾಜಕೀಯದಲ್ಲಿ ಕರ್ನಾಟಕ ಜನತಾ ಪಾರ್ಟಿ ಪುನಃ ಉದಯಿಸಲಿದೆ" ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ ಹೊಸ ಬಾಂಬ್ ಸಿಡಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಗುರುವಾರ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, "ಕರ್ನಾಟಕ ಜನತಾ ಪಾರ್ಟಿ ಮತ್ತೆ ಉದಯಿಸಲಿದ್ದು, ಆ ಪಕ್ಷದೊಂದಿಗೆ ಜೆಡಿಎಸ್ ಕೈಜೋಡಿಸಲಿದೆ" ಎಂದಿದ್ದಾರೆ.
"ಕೆಜೆಪಿ ಸದ್ಯದಲ್ಲೇ ಪುನರ್ ಸ್ಥಾಪನೆಯಾಗಲಿದೆ. ಜೆಡಿಎಸ್ ಸಹಯೋಗದಲ್ಲಿ ಸರ್ಕಾರ ರಚಿಸಲು ತಯಾರಿ ನಡೆಸಲಿದೆ" ಎಂದು ಹೇಳಿದ್ದಾರೆ.
"ಕಾಂಗ್ರೆಸ್ ಮುಖಂಡರು ತೀರ್ಥಹಳ್ಳಿ ತಾಲೂಕಿನಲ್ಲಿ ಆಯೋಜಿಸಿರುವ ಕಾರ್ಯಕ್ರಮಗಳಲ್ಲಿ ಜೆಡಿಎಸ್ ಮುಖಂಡರು ಕಾಣಿಸಿಕೊಳ್ಳುತ್ತಿದ್ದಾರೆ. ಪಕ್ಷದ ಅಭ್ಯರ್ಥಿಗಳ ವಿರುದ್ದ ಸ್ಪರ್ಧಿಸಿದ್ದರೆ ಬೇರೆ ಪಕ್ಷದವರಿಗೆ ಮಣೆ ಹಾಕುವುದರ ಹಿಂದಿನ ಮರ್ಮವೇನು? ನಾನೂ ಕೂಡಾ ಸಭೆಯನ್ನು ಆಯೋಜಿಸಿ, ಬೇರೆ ಪಕ್ಷದ ಮುಖಂಡರನ್ನು ಸಭೆಯಗೆ ಆಹ್ವಾನಿಸಿದರೆ ಸಹಿಸುತ್ತೀರಾ?" ಎಂದು ಕೇಳಿದ್ಧಾರೆ.
ರತ್ನಾಕರ್ ಅವರ ಮಾತಿಗೆ ಹಲವು ಆಕ್ಷೇಪ ವ್ಯಕ್ತಪಡಿಸಿದ್ದು, ಮಾತಿನ ಚಕಮಕಿ ನಡೆಯಿತು. "ಯಾರ್ಯಾರನ್ನು ಕರೆತಂದು ನನ್ನನ್ನು ರಾಜಕೀಯವಾಗಿ ಮುಗಿಸಲು ಆಗುವುದಿಲ್ಲ" ಎಂದಿದ್ದಾರೆ.