ನವದೆಹಲಿ, ಸೆ.30 (DaijiworldNews/PY): ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ಯುದ್ಧ ವಿಮಾನ ಪೈಲಟ್ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ಗುರುವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಚೀನಾದೊಂದಿಗಿನ ಬಿಕ್ಕಟ್ಟಿನ ಉತ್ತುಂಗದ ಸಮಯದಲ್ಲಿ ಲಡಾಖ್ ವಲಯದ ಉಸ್ತುವಾರಿ ವಹಿಸಿದ್ದ ಏರ್ ಫೈಟರ್ ಪೈಲಟ್ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರು ಏರ್ ಚೀಫ್ ಮಾರ್ಷಲ್ ಆರ್ ಕೆ ಎಸ್ ಭದೌರಿಯ ಅವರಿಂದ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.
ಭದೌರಿಯಾ ಅವರು 42 ವರ್ಷಗಳ ಸೇವೆಯ ನಂತರ ನಿವೃತ್ತರಾಗಿದ್ದು, 36 ರಫೇಲ್ಗಳು ಹಾಗೂ ಮಾರ್ಕ್1ಎ ದೇಶೀಯ ತೇಜಸ್ ಜೆಟ್ಗಳು ಸೇರಿದಂತೆ ಎರಡು ಬೃಹತ್ ಯುದ್ದ ವಿಮಾನಗಳ ವಾಸ್ತುಶಿಲ್ಪಿಯಾಗಿದ್ದಾರೆ.
ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ ಅವರ ಪುತ್ರ ರಫೇಲ್ ಯುದ್ದ ವಿಮಾನದ ಪೈಲಟ್ ಆಗಿದ್ದಾರೆ. ಇವರು ಭಾರತೀಯ ವಾಯುಪಡೆಗೆ ರಫೇಲ್ ಯುದ್ಧ ವಿಮಾನಗಳ ಸೇರ್ಪಡೆಗೆ ನೆರವಾಗಿದ್ದರು.