ನವದೆಹಲಿ, ಸೆ.30 (DaijiworldNews/PY): "ನಾನು ಬಿಜೆಪಿ ಪಕ್ಷವನ್ನು ಸೇರುವುದಿಲ್ಲ. ಹಾಗೆಂದು ಕಾಂಗ್ರೆಸ್ನಲ್ಲಿಯೂ ಉಳಿಯುವುದಿಲ್ಲ" ಎಂದು ಕಾಂಗ್ರೆಸ್ ನಾಯಕ ಕ್ಯಾಪ್ಟನ್ ಅಮರಿಂದರ್ ಸಿಂಗ್ ತಿಳಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, "ಈಗ ನಾನು ಕಾಂಗ್ರೆಸ್ನಲ್ಲಿದ್ದೇನೆ. ಆದರೆ, ಕಾಂಗ್ರೆಸ್ನಲ್ಲಿ ಖಂಡಿತವಾಗಿಯೂ ಉಳಿಯುವುದಿಲ್ಲ" ಎಂದಿದ್ದಾರೆ.
ಅಮರಿಂದರ್ ಸಿಂಗ್ ಅವರು ಬುಧವಾರ ಸಂಜೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದು, ಇದಾದ ಒಂದು ದಿನದ ಬಳಿಕ ಕಾಂಗ್ರೆಸ್ ತೊರೆಯುವ ತೀರ್ಮಾನದ ಕುರಿತು ಸ್ಪಷ್ಟಪಡಿಸಿದ್ದಾರೆ.
"ನಾನು ಬಿಜೆಪಿಗೆ ಹೋಗುವುದಿಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೂ ಇರುವುದಿಲ್ಲ, ಸದ್ಯ ನಾನು ಕಾಂಗ್ರೆಸ್ನಲ್ಲಿ ಇದ್ದೇನೆ. ಆದರೆ, ಇದರಲ್ಲಿಯೂ ಕೂಡಾ ಮುಂದುವರಿಯುವುದಿಲ್ಲ" ಎಂದು ತಿಳಿಸಿದ್ದಾರೆ.
"ಕಾಂಗ್ರೆಸ್ ಸದಸ್ಯತ್ವಕ್ಕೆ ನಾನು ರಾಜೀನಾಮೆ ಕೊಟ್ಟಿಇಲ್ಲ. ಆದರೆ, ಸ್ಪಷ್ಟವಾದ ತೀರ್ಮಾನ ಕೈಗೊಂಡಿದ್ದೇನೆ. ನನ್ನನ್ನು ನಡೆಸಿಕೊಂಡ ರೀತಿ ಸರಿಯಿಲ್ಲ. ನಂಬಿಕೆ ಇಲ್ಲದಿದ್ದರೆ ಅಲ್ಲಿ ಮುಂದುವರಿಯಲು ಕೂಡಾ ಸಾಧ್ಯವಿಲ್ಲ" ಎಂದಿದ್ದಾರೆ.
ಪಂಜಾಬ್ ಸಿಎಂ ಸ್ಥಾನಕ್ಕ ಅಮರಿಂದರ್ ಸಿಂಗ್ ಅವರು ಸೆ.18ರಂದು ರಾಜೀನಾಮೆ ನೀಡಿದ್ದರು.