ಪಂಜಾಬ್, ಸೆ 30 (DaijiworldNews/MS): ಮಹತ್ವದ ಬೆಳವಣಿಗೆಯಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪಂಜಾಬ್ ಮುಖ್ಯಮಂತ್ರಿ ಚರಣಜೀತ್ ಸಿಂಗ್ ಚನ್ನಿಯನ್ನು ಭೇಟಿ ಮಾಡಲು ನವಜೋತ್ ಸಿಂಗ್ ಸಿಧು ಒಪ್ಪಿಕೊಂಡಿದ್ದಾರೆ.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರ ಪತ್ನಿ ಪ್ರಣೀತ್ ಕೌರ್ ಅವರನ್ನು ಪಂಜಾಬ್ ಪಿಸಿಸಿ ಮುಖ್ಯಸ್ಥರನ್ನಾಗಿ ಕಾಂಗ್ರೆಸ್ ಆಯ್ಕೆ ಮಾಡುವ ಊಹಾಪೋಹಗಳ ನಂತರ ನಡೆದ ಬೆಳವಣಿಗೆಯಾಗಿದ್ದು, ಸಿಎಂ ಭೇಟಿ ಬಗ್ಗೆ ಸಿದ್ದು ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ಇನ್ನೊಂದೆಡೆ ಪಂಜಾಬ್ ನೂತನ ಸಚಿವ ಪರ್ಗತ್ ಸಿಂಗ್ ಅವರು ದೆಹಲಿ ಮುಖ್ಯಮಂತ್ರಿ ,ಆಪ್ ನಾಯಕ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಗುರುವಾರ ಕಿಡಿ ಕಾರಿದ್ದು ನಿಮ್ಮ ಸಲಹೆ ನಮಗೆ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪಂಜಾಬ್ ಗೆ ಆಗಮಿಸಿದ್ದ ಅರವಿಂದ್ ಕೇಜ್ರಿವಾಲ್ " ಕಳಂಕಿತರು ಮತ್ತು ಭ್ರಷ್ಟ ಅಧಿಕಾರಿಗಳನ್ನು ವಜಾ ಮಾಡಿ ಕ್ರಮ ಕೈಗೊಳ್ಳಲಿ ಎಂದು" ಪಂಜಾಬ್ ಮುಖ್ಯಮಂತ್ರಿ ಚರಣ್ ಜಿತ್ ಸಿಂಗ್ ಛನ್ನಿ ಬಳಿ ಆಗ್ರಹಿಸಿದ್ದರು. ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿ , ನಮಗೆ ಅವರ ಸಲಹೆಯ ಅಗತ್ಯವಿಲ್ಲ. ನಾವು ಪಂಜಾಬ್ನ ಒಳಿತನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ. ನಮ್ಮ ಹೋರಾಟವು ಅನೇಕ ಸಮಸ್ಯೆಗಳ ಕುರಿತಾಗಿ ಹೊರತು ಯಾವುದೇ ವ್ಯಕ್ತಿಯನ್ನು ಆಧರಿಸಿಲ್ಲಎಂದಿದ್ದಾರೆ.