ನವದೆಹಲಿ, ಸೆ 30 (DaijiworldNews/MS): ಸೀರೆಯುಟ್ಟ ಮಹಿಳೆಗೆ ಪ್ರವೇಶ ನಿರಾಕರಿಸಿದ ಆರೋಪದ ಮೇಲೆ ಇತ್ತೀಚೆಗೆ ಸುದ್ದಿಯಾಗಿದ್ದ ದೆಹಲಿ ಅಕ್ವಿಲಾ ರೆಸ್ಟೋರೆಂಟ್ ನ್ನು ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಬಂದ್ ಮಾಡಲಾಗಿದೆ. ಆರೋಗ್ಯ ವ್ಯಾಪಾರ ಲೈಸೆನ್ಸ್ ಇಲ್ಲದೆ ರೆಸ್ಟೋರೆಂಟ್ ನಡೆಸುತ್ತಿದ್ದ ಹಿನ್ನೆಲೆ, ಬಂದ್ ಮಾಡಲಾಗಿದೆ.
ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್ಡಿಎಂಸಿ) ಮೇಯರ್ ಮುಖೇಶ್ ಸೂರ್ಯನ್ ದಕ್ಷಿಣ ದೆಹಲಿ ರೆಸ್ಟೋರೆಂಟ್ ಅನ್ನು ಟ್ರೇಡ್ ಲೈಸೆನ್ಸ್ ಇಲ್ಲದೆ ಕಾರ್ಯನಿರ್ವಹಿಸಿದ್ದಕ್ಕಾಗಿ ಮುಚ್ಚಲಾಗಿದೆ ಎಂದು ದೃಢಪಡಿಸಿದ್ದಾರೆ.
ಸೆಪ್ಟೆಂಬರ್ 21ರಂದು ಆರೋಗ್ಯಾಧಿಕಾರಿಗಳು, ಹಾಗೂ ಮುನ್ಸಿಪಾಲಿಟಿ ಅಧಿಕಾರಿಗಳು ಈ ರೆಸ್ಟೋರೆಂಟ್ ಗೆ ಭೇಟಿ ನೀಡಿದ್ದರು. ಈ ವೇಳೆ ಆರೋಗ್ಯ ವ್ಯಾಪಾರ ಪರವಾನಗಿ ಇಲ್ಲದಿದ್ದಕ್ಕೆ ಮಾಲೀಕರಿಗೆ ನೋಟಿಸ್ ನೀಡಿದ್ದರು. " ನೋಟೀಸ್ ನ್ನು ಮಾಲೀಕರು ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಇದಲ್ಲದೆ ಸಾರ್ವಜನಿಕ ಭೂಮಿಯನ್ನು ಅತಿಕ್ರಮಣ ಮಾಡಿರುವುದು ಕಂಡುಬಂದಿದೆ. ಹೀಗಾಗಿ ಸೆಪ್ಟೆಂಬರ್ 27ರಂದು ನಾವು ಬಂದು ಈ ರೆಸ್ಟೋರೆಂಟ್ ಸೀಲ್ ಮಾಡಿ ಮುಚ್ಚಿ ಸಿದ್ದೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ.
ಕೆಲದಿನಗಳ ಹಿಂದೆ ಮಹಿಳೆಯೊಬ್ಬರು ಸೀರೆ ಧರಿಸಿ ರೆಸ್ಟೋರೆಂಟ್ ಗೆ ಊಟ ಮಾಡಲು ಬಂದಿದ್ದರು. ಈ ವೇಳೆ ಇಲ್ಲಿನ ಸಿಬ್ಬಂದಿ ಸೀರೆ ಉಟ್ಟು ಬಂದ ಮಹಿಳೆಗೆ ಇಲ್ಲಿ ಅವಕಾಶವಿಲ್ಲವೆಂದು ಅವರನ್ನ ಹೊರಗಡೆ ಕಳಿಸಿದ್ದರು. ಈ ಬಗ್ಗೆ ದೇಶವ್ಯಾಪ್ತಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.