ಬೆಂಗಳೂರು: ಸೆ 30 (DaijiworldNews/MS):ಮಾದಕ ವಸ್ತುಗಳ ಮಾರಾಟದ ಆರೋಪದ ಮೇಲೆ ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದ, ನೈಜೀರಿಯಾದ ನಟ ಚೆಕ್ವುಮೆ ಮಾಲ್ವಿನ್ ಅವರನ್ನು ಬೆಂಗಳೂರು ಪೊಲೀಸರು ಬುಧವಾರ ಬಂಧಿಸಿದ್ದಾರೆ.'
ಬೆಂಗಳೂರು ಪೊಲೀಸರಿಗೆ ಸುಳಿವು ದೊರೆತ ನಂತರ ನಟನನ್ನು ನಗರದ ಎಚ್ ಬಿಆರ್ ಲೇಔಟ್ ಪ್ರದೇಶದ ಕಟ್ಟಡದಿಂದ ಬಂಧಿಸಲಾಗಿದೆ. ಪೊಲೀಸ್ ಸಿಬ್ಬಂದಿ 15 ಗ್ರಾಂ ಎಂಡಿಎಂಎ 250 ಮಿಲೀ ಹಶೀಶ್ ತೈಲ, ಮೊಬೈಲ್ ಫೋನ್ ಗಳು ರೂ 2,500 ನಗದು ಮತ್ತು 8 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.
ಬಾಲಿವುಡ್, ಕನ್ನಡ ಮತ್ತು ತಮಿಳು ಚಲನಚಿತ್ರಗಳಲ್ಲಿ ನಟಿಸಿರುವ ಮಾಲ್ವಿನ್, ವೈದ್ಯಕೀಯ ವೀಸಾದಲ್ಲಿ ಭಾರತಕ್ಕೆ ಬಂದಿದ್ದ. ಮುಂಬೈನಲ್ಲಿರುವ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಎರಡು ತಿಂಗಳ ತರಬೇತಿಯನ್ನೂ ಪಡೆದಿದ್ದ. ಸಿಂಗಮ್, ವಿಶ್ವರೂಪಂ, ದಿಲ್ವಾಲೆ, ಅಣ್ಣಾ ಬಾಂಡ್, ಪರಮಾತ್ಮ ಮತ್ತು ಜಂಬೂ ಸಫಾರಿ ಸೇರಿದಂತೆ 20ಕ್ಕೂ ಹೆಚ್ಚು ಭಾರತೀಯ ಚಲನಚಿತ್ರಗಳಲ್ಲಿ ಕೆಲಸ ಮಾಡುತ್ತಿರುವ ಚೆಕ್ವುಮೆ ಮಾಲ್ವಿನ್ ನನ್ನುಕಾಯ್ದೆ, 1985ರ ಸೆಕ್ಷನ್ ಗಳ ಅಡಿಯಲ್ಲಿ ಬಂಧಿಸಲಾಗಿದೆ.
ಆರೋಪಿ ಮುಖ್ಯವಾಗಿ ಕಾಲೇಜು ವಿದ್ಯಾರ್ಥಿಗಳು ಮತ್ತು ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಡ್ರಗ್ ಸರಬರಾಜು ಮಾಡುತ್ತಿದ್ದನು ಎಂದು ವರದಿಯಾಗಿದೆ.