ಮೇಘಾಲಯ, ಸೆ 30 (DaijiworldNews/MS): ಮೇಘಾಲಯದಲ್ಲಿ 21 ಜನರನ್ನು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ನದಿಯಲ್ಲಿ ಬಿದ್ದು ಆರು ಮಂದಿ ಮೃತಪಟ್ಟ ದುರ್ಘಟನೆ ನಡೆದಿದೆ. ಬಸ್ ಟುರಾದಿಂದ ಶಿಲ್ಲಾಂಗ್ಗೆ ಪ್ರಯಾಣಿಸುತ್ತಿದ್ದಾಗ ಇಂದು ಮುಂಜಾವ 12 ಗಂಟೆಗೆ ನೋಂಗ್ಚ್ರಾಮ್ನ ರಿಂಗ್ಡಿ ನದಿಗೆ ಉರುಳಿ ಬಿದ್ದಿದೆ.
ಬಸ್ ನದಿಗೆ ಬಿದ್ದ ಸುದ್ದಿ ತಿಳಿಯುತ್ತಿದ್ದಂತೆ ಸಹಾಯ ಮಾಡಲು ರಕ್ಷಣಾ ತಂಡ ಮತ್ತು ತುರ್ತು ಸೇವೆಗಳು ಅಪಘಾತ ಸ್ಥಳಕ್ಕೆ ಧಾವಿಸಿವೆ.
ಆರು ಮೃತ ದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದ್ದು, ಎರಡು ಮೃತ ದೇಹಗಳು ಇನ್ನೂ ಬಸ್ಸಿನೊಳಗೆ ಸಿಲುಕಿಕೊಂಡಿವೆ.ಅದನ್ನು ಹೊರತೆಗೆಯುವುದು ಸವಾಲಾಗಿದೆ ಎಂದು ಹೇಳಲಾಗಿದೆ. ಈವರೆಗೆ 16 ಪ್ರಯಾಣಿಕರನ್ನು ರಕ್ಷಿಸಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಬಸ್ಸಿನ ಚಾಲಕ ಮೃತರಲ್ಲಿ ಸೇರಿದ್ದಾರೆ.