ಬೆಂಗಳೂರು, ಸೆ.29 (DaijiworldNews/PY): "ಬಿಜೆಪಿ ಪಕ್ಷಕ್ಕೆ ಅತ್ಯಾಚಾರಿಗಳು, ಕೊಲೆಗಡುಕರು, ಭಯೋತ್ಪಾದಕರು ಎಂದರೆ ಬಲು ಪ್ರೀತಿ, ಅವರ ರಕ್ಷಣೆಗೆ ಟೊಂಕ ನಿಲ್ಲುತ್ತದೆ" ಬಿಜೆಪಿ ಎಂದು ರಾಜ್ಯ ಕಾಂಗ್ರೆಸ್ ಹೇಳಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಕೊಲೆಗಡುಕರಿಗೆ ಬಿಜೆಪಿಯಲ್ಲದೆ ಬೇರೆ ಯಾವ ಸರ್ಕಾರವೂ ರಕ್ಷಣೆ ನೀಡಿದ ಉದಾಹರಣೆ ಇಲ್ಲ, ಬಿಜೆಪಿ ಪಕ್ಷಕ್ಕೆ ಅತ್ಯಾಚಾರಿಗಳು, ಕೊಲೆಗಡುಕರು, ಭಯೋತ್ಪಾದಕರು ಎಂದರೆ ಬಲು ಪ್ರೀತಿ, ಅವರ ರಕ್ಷಣೆಗೆ ಟೊಂಕ ನಿಲ್ಲುತ್ತದೆ ಬಿಜೆಪಿ. ತಾಲಿಬಾನಿಗಳು, ಬಿಜೆಪಿಗರು ಒಡಹುಟ್ಟಿದ ಮಕ್ಕಳು, ಇಬ್ಬರದ್ದೂ ಭಯೋತ್ಪಾದಕ ಮನಸ್ಥಿತಿಯೇ" ಎಂದಿದೆ.
"ಸಿಎಂ ಬದಲಾವಣೆಯ ನಂತರ ಬೂದಿ ಮುಚ್ಚಿದ ಕೆಂಡದಂತಿದ್ದ BJPvsBJP ಕಚ್ಚಾಟ ಈಗ ಹೊಸ ಆಯಾಮಕ್ಕೆ ತಿರುಗಿದೆ, ಬಿಜೆಪಿ ಅವರನ್ನು ಕಣ್ಣೀರು ಹಾಕಿಸಿ ಕೆಳಗಿಳಿಸಿದ ಬಿಜೆಪಿ, ಈಗ ಅವರ ಬೆಂಬಲಿಗರನ್ನೂ ಮುಗಿಸುತ್ತಿದೆ. ನಳಿನ್ ಕುಮಾರ್ ಕಟೀಲ್ ತಮ್ಮ ಮೀರ್ ಸಾದಿಕ್ ತಂತ್ರವನ್ನು ಮುಂದುವರೆಸಿ ಮುಳುಗುತ್ತಿರುವ ಬಿಜೆಪಿಯ ಹಡಗಿಗೆ ತೂತು ಕೊರೆಯುತ್ತಿದ್ದಾರೆ!" ಎಂದು ಲೇವಡಿ ಮಾಡಿದೆ.
"ಬಿಜೆಪಿ ಸಾಕಿರುವ ಭಯೋತ್ಪಾದಕ ಪಡೆಗಳ ಗೂಂಡಾಗಿರಿ ಮಿತಿ ಮೀರುತ್ತಿದೆ. ತಾಲಿಬಾನಿಗಳಂತೆ ಯಾರದ್ದೋ ಮನೆಯ ಮಕ್ಕಳ ಮೇಲೆ ಅನೈತಿಕ ಪೊಲೀಸ್ಗಿರಿ ಎಸಗಲು ಇವರಿಗೆ ಅನುಮತಿ ಕೊಟ್ಟವರು ಯಾರು? ಗೃಹ ಸಚಿವರೇ, ಪೊಲೀಸ್ ಇಲಾಖೆಯನ್ನು ಸಮಾಜಘಾತುಕರ ಕೈ ವರ್ಗಾಯಿಸಿದ್ದೀರಾ? ರಾಜ್ಯದಲ್ಲಿ ತಾಲಿಬಾನಿಕರಣ ಸ್ಥಾಪಿಸಲು ಮುಂದಾಗಿದ್ದೀರಾ?" ಎಂದು ಪ್ರಶ್ನಿಸಿದೆ.
"ಆಕಸ್ಮಿಕವಾಗಿ ಎಲ್ಲರ ಪಂಚೆಯೂ ಕಳಚುತ್ತದೆ, ಬಿಜೆಪಿಗರದ್ದೂ ಸಹ. ಆದರೆ ಕೆಲವು ಬಿಜೆಪಿ ನಾಯಕರು ತಾವೇ ಸಂಪೂರ್ಣ ಬಟ್ಟೆ ಕಳಚಿ, ರಾಜ್ಯದ ಎದುರು ಬೆತ್ತಲಾಗಿದ್ದು ಜನತೆ ನೋಡಿದ್ದಾರೆ. ಸಿ ಟಿ ರವಿ ಹಾಗೂ ಎಸ್ ಆರ್ ವಿಶ್ವನಾಥ್ ಅವರೇ ಸಚಿವ ಮಾಧುಸ್ವಾಮಿಯವರ ಪಂಚೆ ಕಳಚಿದ್ದನ್ನು ಆಡಿಕೊಳ್ಳಬೇಡಿ!" ಎಂದಿದೆ.
"ಬಿಜೆಪಿ ಬೆಂಬಲದ ವಿ ಪಿ ಸಿಂಗ್ ಸರ್ಕಾರವಿದ್ದಾಗ ಕಾಶ್ಮೀರಿ ಪಂಡಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಬಿಜೆಪಿ ಮೌನವಹಿಸಿತ್ತು, ಏಕೆಂದರೆ ಪಂಡಿತರ ಮೇಲಿನ ದೌರ್ಜನ್ಯದ ಹಿಂದೆ ಇದ್ದಿದ್ದು ಬಿಜೆಪಿಯದ್ದೇ ಕೈವಾಡ. ಅಂದಿನಿಂದ ಇಂದಿನವರೆಗೂ ಬಿಜೆಪಿ ತಾಲಿಬಾನ್ ಮನಸ್ಥಿತಿ ಮುಂದುವರೆಸಿದೆ, ತಾಲಿಬಾನಿಗಳಿಗೆ ಬಿಜೆಪಿಯೇ ಪ್ರೇರಣೆ!" ಎಂದು ಹೇಳಿದೆ.