ಬೆಂಗಳೂರು, ಸೆ 29 (DaijiworldNews/MS): ಈ ನೆಲದ ಸಂಸ್ಕೃತಿ ಹಾಳುಮಾಡಲು ಮತಾಂತರ ಮಾಡುತ್ತಿದ್ದಾರೆ. ಮತಾಂತರ ಮಾಡುವವರು ದೇಶದ್ರೋಹಿಗಳು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ನಮ್ಮ ನೆಲದ ಸಂಸ್ಕೃತಿ ಹಾಳು ಮಾಡಲು ಮತಾಂತರ ಮಾಡುತ್ತಾರೆ ಯಾವುದೋ ದೇಶದ ದುಡ್ಡನ್ನು ತಂದು ಹೀಗೆ ಮಾಡುತ್ತಾರೆ. ಹೀಗಾಗಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜತೆ ಚರ್ಚಿಸಿ ಒಂದು ಸೂಕ್ತ ಕಾನೂನು ತರಬೇಕಾಗಿದೆ. ನಮ್ಮ ಸರ್ಕಾರ ಇರುವುದಕ್ಕೆ ಇದೆಲ್ಲವೂ ಹೊರಗೆ ಬರುತ್ತಿದೆ ಎಂದು ಸಚಿವರು ಹೇಳಿದ್ದಾರೆ.
"ಕೊವೀಡ್ ನಿಂದ ಮೃತಪಟ್ಟವರ ಬಗ್ಗೆ ಕುಟುಂಬಸ್ಥರಲ್ಲಿ ದಾಖಲೆ ಇದೆ. ವೈದ್ಯರು ನೀಡಿರುವ ಸರ್ಟಿಫಿಕೆಟ್ ಕುಟುಂಬಸ್ಥರ ಬಳಿಯಿದೆ. ಇದರೊಂದಿಗೆ ತಹಶೀಲ್ದಾರ್, ಆರ್ಐ ಕಡೆಯಿಂದ ಸತ್ತವರ ಬಗ್ಗೆ ರಿಪೋರ್ಟ್ ಇದೆ. ಮೃತಪಟ್ಟವರಿಗೆ ಆಸ್ಪತ್ರೆಯಿಂದ ಪೇಷಂಟ್ ನಂಬರ್ ಇರುತ್ತೆ. ಪರಿಹಾರ ವಿತರಣೆಯಲ್ಲಿ ಬೋಗಸ್ ಆಗಲು ಅವಕಾಶವಿರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಆರೋಪಕ್ಕೆ ಸಚಿವರು ತಿರುಗೆಟು ನೀಡಿದ್ದಾರೆ.