ಚಂಡೀಗಡ, ಸೆ.29 (DaijiworldNews/PY): "ನನ್ನ ಕೊನೆಯ ಉಸಿರು ಇರುವವರೆಗೂ ಸತ್ಯ ಹಾಗೂ ನ್ಯಾಯಕ್ಕಾಗಿ ಹೋರಾಡುತ್ತಲೇ ಇರುತ್ತೇನೆ" ಎಂದು ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ತಿಳಿಸಿದ್ದಾರೆ.
ಈ ಬಗ್ಗೆ ವಿಡಿಯೋ ಸಂದೇಶ ಟ್ವೀಟ್ ಮಾಡಿರುವ ಅವರು, "ನನಗೆ ಯಾರೊಂದಿಗೂ ವೈಯುಕ್ತಿಕ ದ್ವೇಷವಿಲ್ಲ" ಎಂದಿದ್ದಾರೆ.
"17 ವರ್ಷಗಳ ನನ್ನ ರಾಜಕೀಯ ಜೀವನಕ್ಕೆ ಒಂದು ನಿರ್ದಿಷ್ಟವಾದ ಗುರಿ ಇದೆ. ಬದಲಾವಣೆ ತರಬೇಕು, ಒಂದು ನಿಲುವನ್ನು ತೆಗೆದುಕೊಳ್ಳಲು ಹಾಗೂ ಪಂಜಾಬ್ ಜನರ ಜೀವನವನ್ನು ಉತ್ತಮಗೊಳಿಸಬೇಕು ಎನ್ನುವ ಉದ್ದೇಶವನ್ನು ಹೊಂದಿದೆ. ಇದು ನನ್ನ ಕರ್ತವ್ಯ ಹಾಗೂ ಹಕ್ಕು" ಎಂದು ತಿಳಿಸಿದ್ದಾರೆ.
"ನನ್ನ ಕೊನೆಯ ಉಸಿರು ಇರುವವರೆಗೂ ನಾನು ಹಕ್ಕು ಹಾಗೂ ಸತ್ಯಕ್ಕಾಗಿ ಹೋರಾಡುತ್ತಲೇ ಇರುತ್ತೇನೆ, ನನ್ನ ನೈತಿಕ ಅಧಿಕಾರೊಂದಿಗೆ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.
ಪಂಜಾಬ್ ವಿಧಾನಸಭೆ ಚುನಾವಣೆ ಸಮೀಪಿಸುತ್ತುರುವ ಕಾರಣದಿಂದ ಪಂಜಾಬ್ ಕಾಂಗ್ರೆಸ್ನಲ್ಲಾಗುತ್ತಿರುವ ಬೆಳವಣಿಗೆಗಳು ರಾಷ್ಟ್ರದ ಗಮನ ಸೆಳೆದಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಭಿನ್ನಮತ ಶಮನದ ಭಾಗವಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸ ಸಿಎಂ ಆಗು ಚರಣ್ಜಿತ್ ಸಿಂಗ್ ಚನ್ನಿ ಅಧಿಕಾರಕ್ಕೆ ಏರಿದರು.