ನವದೆಹಲಿ, ಸೆ.29 (DaijiworldNews/PY): "ಕಾಂಗ್ರೆಸ್ ಪಕ್ಷ ಒಂದು ದೊಡ್ಡ ಹಡಗಿದ್ದಂತೆ. ಅದು ಉಳಿದರೆ ಅನೇಕ ಜನರ ಆಕಾಂಕ್ಷೆ, ಮಹಾತ್ಮ ಗಾಂಧಿಯವರ ಏಕತೆ, ಭಗತ್ ಸಿಂಗ್ ಅವರ ಧೈರ್ಯ ಹಾಗೂ ಬಿ ಆರ್ ಅಂಬೇಡ್ಕರ್ ಅವರ ಸಮಾನತೆಯ ನೀತಿಗಳು ರಕ್ಷಣೆಯಾಗುತ್ತವೆ" ಎಂದು ಕನ್ನಯ್ಯ ಕುಮಾರ್ ಹೇಳಿದ್ಧಾರೆ.
"ಕಾಂಗ್ರೆಸ್ ಪಕ್ಷಕ್ಕೆ ನಾನು ಸೇರ್ಪಡೆಯಾಗುತ್ತಿದ್ದೇನೆ. ಏಕೆಂದರೆ, ಇದು ಕೇವಲ ಪಕ್ಷವಲ್ಲ ಇಂದು ಒಂದು ಕಲ್ಪನೆ. ಕಾಂಗ್ರೆಸ್ ದೇಶ ಕಂಡ ಹಳೆಯ ಹಾಗೂ ಅತ್ಯಂತ ಪ್ರಜಾಸತ್ತಾತ್ಮಕ ಪಕ್ಷ. ನಾನು ಪ್ರಜಾಪ್ರಭುತ್ವಕ್ಕೆ ಒತ್ತು ನೀಡುತ್ತೇನೆ. ಕಾಂಗ್ರೆಸ್ ಪಕ್ಷ ಇಲ್ಲದೇ ಇದ್ದಲ್ಲಿ ನಾನು ಮಾತ್ರವೇ ಅಲ್ಲ, ದೇಶವೂ ಉಳಿಯಲು ಸಾಧ್ಯವಿಲ್ಲ" ಎಂದಿದ್ದಾರೆ.
"ಬಿಜೆಪಿಯ ನಿರ್ದಿಷ್ಟ ಸಿದ್ದಾಂತಗಳು ಭಾರತದ ಮೌಲ್ಯಗಳು ಸೇರಿದಂತೆ ಸಂಸ್ಕೃತಿ, ಇತಿಹಾಸ ಹಾಗೂ ಭವಿಷ್ಯವನ್ನು ಹಾಳು ಮಾಡಲು ಪ್ರಯತ್ನಿಸುತ್ತಿದೆ. ಕಾಂಗ್ರೆಸ್ ಉಳಿಯದೇ ಇದ್ದರೆ ದೇಶ ಉಳಿಯಲು ಸಾಧ್ಯವಿಲ್ಲ" ಎಂದು ತಿಳಿಸಿದ್ದಾರೆ.
"ಪ್ರಜಾಪ್ರಭುತ್ವದ ಕುರಿತು ನಾನು ಒಲವು ಹೊಂದಿದ್ದೇನೆ. ಕಾಂಗ್ರೆಸ್ ಒಂದು ದೊಡ್ಡ ಹಡಗು ಇದ್ದಂತೆ. ಅದು ಉಳಿದರೆ ಮಾತ್ರವೇ ಅನೇಕ ಜನರ ಆಕಾಂಕ್ಷೆ ಉಳಿಯುತ್ತದೆ. ಹಾಗಾಗಿ ನಾನು ಕಾಂಗ್ರೆಸ್ಗೆ ಸೇರ್ಪಡೆಗೊಂಡಿದ್ದೇನೆ" ಎಂದಿದ್ದಾರೆ.