ಬೆಂಗಳೂರು, ಸೆ.28 (DaijiworldNews/HR): ಕೇಂದ್ರದ ಬಿಜೆಪಿ ಸರ್ಕಾರ ಉದ್ಯೋಗ ನಷ್ಟವಾಗಿರುವ ಬಗ್ಗೆ ವಾಸ್ತವ ಮರೆಮಾಚಿದ್ದರೂ ಕೊನೆಗೂ ಅನಿವಾರ್ಯವಾಗಿ ಸತ್ಯವನ್ನು ಒಪ್ಪಿಕೊಂಡಿದೆ ಎಂದು ಕಾಂಗ್ರೆಸ್ ಹೇಳಿದೆ.
ಸಾಂದರ್ಭಿಕ ಚಿತ್ರ
ಕೊರೊನಾದ ಮೊದಲನೇ ಅಲೆಯ ಲಾಕ್ಡೌನ್ನಿಂದ ಮಾರ್ಚ್ ನಿಂದ ಜೂನ್ ಅವಧಿಯಲ್ಲಿ ದೇಶದ 9 ಪ್ರಮುಖ ಕೃಷಿಯೇತರ ವಲಯಗಳಲ್ಲಿ 23.6 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ಸಮೀಕ್ಷೆ ತಿಳಿಸಿತ್ತು.
ಈ ಕುರಿತ ಟ್ವೀಟ್ ಮಾಡಿರುವ ಕಾಂಗ್ರೆಸ್, "ಮರ್ಯಾದೆ ಉಳಿಸಿಕೊಳ್ಳುವ ಸಲುವಾಗಿ ವಾಸ್ತವ ಮರೆಮಾಚಿ ಅಂಕಿ ಅಂಶಗಳನ್ನು ನೀಡಿದ್ದರೂ ಬಿಜೆಪಿ ಸರ್ಕಾರವು ಉದ್ಯೋಗ ನಷ್ಟವನ್ನು ಅನಿವಾರ್ಯವಾಗಿ ಒಪ್ಪಿಕೊಂಡಿದ್ದು" ಎಂದಿದೆ.
ಇನ್ನು ಸರ್ಕಾರದ ಪ್ರಕಾರ, ಕೇವಲ 3 ತಿಂಗಳಲ್ಲಿ 23 ಲಕ್ಷ ಉದ್ಯೋಗ ನಷ್ಟವಾಗಿದ್ದು ಆತಂಕಕಾರಿ ಸಂಗತಿ. 'ಪಕೋಡಾನಾಮಿಕ್ಸ್' ಸೂತ್ರದ ಬಿಜೆಪಿ ಸರ್ಕಾರದಿಂದ ಜನತೆಗೆ ಮತ್ತೊಮ್ಮೆ ಉದ್ಯೋಗ ಸಿಗಬಹುದಾದ ಯಾವ ನಿರೀಕ್ಷೆಯೂ ಇಲ್ಲ ಎಂದು ಹೇಳಿದೆ.