ಬಾಗಲಕೋಟೆ, ಸೆ.28 (DaijiworldNews/HR): ಪ್ರಜಾಪ್ರಭುತ್ವದ ಮೇಲೆ ಆರ್ಎಸ್ಎಸ್ನವರಿಗೆ ನಂಬಿಕೆಯೇ ಇಲ್ಲ, ಅವರದ್ದು ತಾಲಿಬಾನ್ ಸಂಸ್ಕೃತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಎಸ್ಎಸ್ ಅವರದ್ದು ತಾಲಿಬಾನ್ ಸಂಸ್ಕೃತಿ, ಆರ್ಎಸ್ಎಸ್ನವರಿಗೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆಯೇ ಇಲ್ಲ, ಆರ್ಎಸ್ಎಸ್ನವರು ತಾಲಿಬಾನಿಗಳು" ಎಂದು ಕಿಡಿಕಾರಿದ್ದಾರೆ.
ಇನ್ನುಆರ್ಎಸ್ಎಸ್ ಮತ್ತು ಬಿಜೆಪಿಯವರಿಗೆ ಮನುಷ್ಯತ್ವ ಇಲ್ಲ, ತಾಲಿಬಾನಿಗಳಿಗೆ ಮನುಷ್ಯತ್ವ ಇಲ್ಲ. ರಾಕ್ಷಸಿಯ ಪ್ರವೃತ್ತಿ ಹೊಂದಿದ್ದಾರೆ. ಅದಕ್ಕೆ ಅವರನ್ನು ತಾಲಿಬಾನಿಗಳು ಎಂದು ಕರೆಯುತ್ತಾರೆ. ಅವರಂತೆಯೇ ಆರ್ಎಸ್ಎಸ್ಗೂ ಬಿಜೆಪಿಯವರಿಗೂ ಮನುಷ್ಯತ್ವ ಇಲ್ಲ" ಎಂದು ಹೇಳಿದ್ದಾರೆ.