ಕಾಮರೆಡ್ಡಿ, ಸೆ.28 (DaijiworldNews/HR): ತೆಲಂಗಾಣದ ಮೇಡ್ಚಲ್-ಮಲ್ಕಾಜಗಿರಿ ಜಿಲ್ಲೆಯ ಬಚುಪಲ್ಲಿ ಎಂಬಲ್ಲಿ ಮದುವೆಯಾದ ಒಂದೇ ತಿಂಗಳಲ್ಲಿ ಪತಿಯೊಬ್ಬ ಪತ್ನಿಯ ಮೇಲೆ ಅನುಮಾನಗೊಂಡು ಹತ್ಯೆ ಮಾಡಿರುವ ಆತಂಕಕಾರಿ ಘಟನೆ ನಡೆದಿದೆ.
ಕಾಮರೆಡ್ಡಿ ಜಿಲ್ಲೆಯ ತಿಮ್ಮಾಪ್ಪೂರ್ ಸುಧಾರಾಣಿ ಕೊಲೆಯಾದ ನವವಿವಾಹಿತೆ.
ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಪತಿ ಕಿರಣ್ ಕುಮಾರ್, ಹೈದರಾಬಾದ್ನ ಪ್ರಗತಿ ನಗರದ ಶ್ರೀಶೈದ್ವಾರಕ ಅಪಾರ್ಟ್ಮೆಂಟ್ನಲ್ಲಿ ಫ್ಲ್ಯಾಟ್ ಒಂದನ್ನು ಖರೀದಿಸಿದ್ದನು. ಮಗಳನ್ನು ನೋಡಲು ಹೈದರಾಬಾದ್ಗೆ ಬರುವುದಾಗಿ ಸುಧಾರಣಿ ಪೋಷಕರು ಕಿರಣ್ಗೆ ಹೇಳಿದ್ದರು. ಅಂತೆಯೇ ಪಾಲಕರು ಬಂದಿದ್ದಾರೆ. ಕಾಲಿಂಗ್ ಬೆಲ್ ಮಾಡಲು ಯಾರೂ ಮನೆಯ ಬಾಗಿಲು ತೆರೆಯದಿದ್ದಾಗ ಮಗಳ ಮೊಬೈಲ್ ನಂಬರ್ಗೆ ಕರೆ ಮಾಡಿದ್ದಾರೆ. ಆದರೆ ಮಗಳ ಕರೆ ಸ್ವೀಕರಿಸದೇ ಇರುವುದನ್ನು ನೋಡಿದ ಪಾಲಕರು ಅನುಮಾನಗೊಂಡು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ.
ಇನ್ನು ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡಿದಾಗ ಸುಧಾರಾಣಿ ರಕ್ತದ ಮಡುವಿನಲ್ಲಿ ಬಿದ್ದು ಮೃತಪಟ್ಟಿದ್ದಳು.
ಕಿರಣ್ ಕೂಡ ತನ್ನ ಕುತ್ತಿಗೆ ಕೂಯ್ದುಕೊಂಡಿದ್ದು, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದು, ಆತನ ಸ್ಥಿತಿಯು ತುಂಬಾ ಗಂಭೀರವಾಗಿದೆ. ಮತ್ತೆ ಪ್ರಜ್ಞೆ ಬಂದರೆ ಆತನಿಂದ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.