ಕಾಶ್ಮೀರ, ಸೆ.28 (DaijiworldNews/HR): ಜಮ್ಮು ಮತ್ತು ಕಾಶ್ಮೀರದ ಉರಿ ಸೆಕ್ಟರ್ನಲ್ಲಿ ಪಾಕಿಸ್ತಾನದ ಉಗ್ರರನ್ನು ಭಾರತೀಯ ಸೇನೆ ಸೆರೆಹಿಡಿದಿದ್ದು, ಇನ್ನೊಬ್ಬನನ್ನು ಹತ್ಯೆಗೈದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಸಾಂದರ್ಭಿಕ ಚಿತ್ರ
ಗಡಿ ನಿಯಂತ್ರಣ ರೇಖೆಯ ಉರಿ ಸೆಕ್ಟರ್ ನಲ್ಲಿ ಸೇನೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ನಾಲ್ವರು ಸೈನಿಕರಿಗೆ ಗುಂಡು ತಗುಲಿ ಗಾಯಗಳಾಗಿವೆ.
ಇನ್ನು ಕಳೆದ ಎರಡು ದಿನಗಳಲ್ಲಿ ಮೂರು ವಿಭಿನ್ನ ಸ್ಥಳಗಳಲ್ಲಿ ನುಸುಳುಕೋರರೊಂದಿಗೆ ಸಂಪರ್ಕ ಸ್ಥಾಪಿಸಲು ಸೇನೆಗೆ ಸಾಧ್ಯವಾಯಿತು ಎಂದು ಮೂಲಗಳು ತಿಳಿಸಿವೆ.
ಸೇನೆ ಶೋಧಕಾರ್ಯ ನಡೆಸುತ್ತಿರುವಾಗ ಪಾಕಿಸ್ತಾನದ ನುಸುಳುಕೋರನೊಬ್ಬನನ್ನು ಎನ್ ಕೌಂಟರ್ ನಲ್ಲಿ ಮಾಡಿ ಹತ್ಯೆಗೈಯಲಾಗಿದೆ ಎಂದು ಸೇನೆ ತಿಳಿಸಿದೆ.