ಬೆಂಗಳೂರು, ಸೆ 28 (DaijiworldNews/MS): ಐಷಾರಾಮಿ ವಿಲ್ಲಾ ಬಾಡಿಗೆ ಪಡೆದು ಟೇರೆಸ್ ಹಾಗೂ ರೂಮ್ ನಲ್ಲೇ ಹೈಡ್ರೋ ಗಾಂಜಾ ಬೆಳೆಯುತ್ತಿದ್ದ ಖತರ್ನಾಕ್ ಆರೋಪಿ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಡ್ರಗ್ ಪೆಡ್ಲರ್ ನೀಡಿದ ಮಾಹಿತಿ ಮೇರೆಗೆ ಸಿಸಿಬಿ ದಾಳಿ ನಡೆಸಿದೆ.
ಈಗಲ್ಟನ್ ರೆಸಾರ್ಟ್ ಮೇಲೆ ಸಿಸಿಬಿ ದಾಳಿ ನಡೆಸಿದ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಇಬ್ಬರು ಇರಾನಿ ವಿದೇಶಿ ಪ್ರಜೆ ಸೇರಿ ಒಟ್ಟು ನಾಲ್ವರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಬರೋಬ್ಬರಿ 150 ಹೈಡ್ರೋ ಗಾಂಜಾ ಗಿಡಗಳು, ಎರಡು ಕೋಟಿಗೂ ಅಧಿಕ ಮೌಲ್ಯದ 9 ಕೆ.ಜಿ. ಹೈಡ್ರೋ ಗಾಂಜಾ ವಶಕ್ಕೆ ಪಡೆಯಲಾಗಿದೆ.
ವಿದ್ಯಾಭ್ಯಾಸ ಪಡೆಯುವ ಸಲುವಾಗಿ ಸ್ಟುಡೆಂಟ್ ವೀಸಾದಲ್ಲಿ ಆರೋಪಿ ಜಾವೇದ್ ಬಿಡದಿ ಬಳಿಯ ಈಗಲ್ ಟನ್ ರೆಸಾರ್ಟ್ ವಿಲ್ಲಾದಲ್ಲಿ ರುಸ್ತುಂ ಪುರ್ ಹೈಡ್ರೋ ಗಾಂಜಾ ಬೆಳೆಸುತ್ತಿದ್ದ. ಈತ ಹೈಡ್ರೋ ಗಾಂಜಾ ಬೆಳೆಯಲೆಂದೆ 36 ಸಾವಿರಕ್ಕೆ ವಿಲ್ಲಾ ಬಾಡಿಗೆಗೆ ಪಡೆದಿದ್ದ ಕಳೆದ ಒಂದೂವರೆ ವರ್ಷದಿಂದ ವಿಲ್ಲಾದ ರೂಮ್, ಟೆರೆಸ್ ನಲ್ಲಿ ಗಾಂಜಾ ಗಿಡ ಬೆಳೆಸುತ್ತಿದ್ದ. ಯುರೋಪ್ ನಿಂದ ಹೈಬ್ರೀಡ್ ಗಾಂಜಾ ಬೀಜಗಳನ್ನ ತರಿಸಿಕೊಂಡು ಬಳಿಕ ವ್ಯವಸ್ಥಿತವಾಗಿ ಗಾಂಜಾ ಬೀಜಗಳನ್ನ ಬಿತ್ತಿ ಮಾಡಿ ಬೆಳೆಯುತ್ತಿದ್ದ. ಸೂರ್ಯನ ಬೆಳಕು ಬೀಳದಂತೆ ಫ್ಯಾನ್ ಕೂಲರ್ ಇಟ್ಟು ವಿಲ್ಲಾದಲ್ಲಿ ಗಾಂಜಾ ಬೆಳೆಯಲು ವ್ಯವಸ್ಥೆ ಮಾಡಿಕೊಂಡಿದ್ದ. ಹೈಡ್ರೋ ಗಿಡ ಬೆಳೆದ ನಂತ್ರ ವಿಲ್ಲಾದಲ್ಲೇ ಅದನ್ನು ಒಣಗಿಸಿ ಪ್ಯಾಕೇಟ್ ಮಾಡಿ ಮಾರಾಟ ಮಾಡುತ್ತಿದ್ದ.
ಸದ್ಯ ಬಂಧಿತರಿಂದ 130 ಹೈಡ್ರೋ ಗಾಂಜಾ ಗಿಡಗಳು, ಯುವಿ ಲೈಟ್ಸ್, ಎಲ್.ಇ.ಡಿ ಲ್ಯಾಂಪ್ಸ್, ಎಲೆಕ್ಟ್ರಿಕಲ್ ವೆಯ್ಟಿಂಗ್ ಮಷಿನ್, 1 ಕೋಟಿ ಬೆಲೆಯ 12 ಕೆಜಿ 850 ಗ್ರಾಂ ತೂಕದ ಹೈಡ್ರೋ ಗಾಂಜಾ, ಒಂದು ಸ್ಕೋಡಾ ಕಾರು, 4 ಮೊಬೈಲ್ ವಶಕ್ಕೆ ಪಡೆಯಲಾಗಿದೆ.