ಬೆಂಗಳೂರು, ಸೆ.28 (DaijiworldNews/HR): ಕಾಂಗ್ರೆಸ್ ಗುಲಾಮಗಿರಿ ಪಕ್ಷ, ಬಿಜೆಪಿ ದೇಶಭಕ್ತಿ ಹೊಂದಿರುವ ಪಕ್ಷ ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಗೆ ಕಾಂಗ್ರೆಸ್ ತಿರುಗೇಟು ನೀಡಿದೆ.
ಸಾಂದರ್ಭಿಕ ಚಿತ್ರ
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಸಿಎಂ ಬೊಮ್ಮಾಯಿ ಅವರೇ ಇತ್ತೀಚೆಗಷ್ಟೇ ನಿಮ್ಮದೇ ಪಕ್ಷದ ಸುಬ್ರಮಣಿಯನ್ ಸ್ವಾಮಿ ಅವರು ಬಿಜೆಪಿಯಲ್ಲಿ ಬೂಟು ನೆಕ್ಕುವ ಗುಲಾಮರೇ ತುಂಬಿದ್ದಾರೆ ಎಂದು ತಿಳಿಸಿದ್ದು ನೆನಪಿದೆಯೇ?" ಎಂದು ಪ್ರಶ್ನಿಸಿದೆ.
ಇನ್ನು ಗುಲಾಮಗಿರಿ ಸಂಸ್ಕೃತಿಯ ಬಿಜೆಪಿಯಲ್ಲಿ ಮೋದಿ- ಅಮಿತ್ ಶಾ ಜೋಡಿಯ ಬೂಟು ನೆಕ್ಕುವ ಕಡ್ಡಾಯ ನಿಯಮವಿದೆ ಎಂದು ನಿಮ್ಮವರೇ ಹೇಳಿದ್ದಾರೆ! ಗುಲಾಮಗಿರಿ' ಬಿಜೆಪಿಗರಿಗೆ ರಕ್ತಗತವಾಗಿ ಬಂದ ಬಳುವಳಿ! ಎಂದು ತಿರುಗೇಟು ನೀಡಿದೆ.