ಬಾಗಲಕೋಟೆ, ಸೆ. 27 (DaijiworldNews/SM): ರಾಜ್ಯ ರಾಜಕೀಯದಲ್ಲಿ ದಿನಕ್ಕೊಂದು ಬದಲಾವಣೆಗಳು ನಡೆಯುತ್ತಿವೆ. ಈ ನಡುವೆ ಸಿದ್ಧರಾಮಯ್ಯ ರಾಜ್ಯದಲ್ಲಿ ಸಿಎಂ ಆಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷ ಚುನಾವಣೆ ಗೆದ್ದಲ್ಲಿ ನಾನೇ ಸಿಎಂ ಎಂದಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಇದರಿಂದಾಗಿ ಕಾಂಗ್ರೆಸ್ ಪಕ್ಷದಲ್ಲಿ ತಾನು ಸಿಎಂ ಸ್ಥಾನದ ಆಕಾಂಕ್ಷೆ ಎಂದಿದ್ದು, ಇತರ ನಾಯಕರಿಗೆ ಟಕ್ಕರ್ ನೀಡಿದ್ದಾರೆ. ಈ ಹಿಂದೆ ಸಿಎಂ ಆಗಿದ್ದಾಗ ಜನಸಾಮಾನ್ಯರಿಗೆ ನೀಡುತ್ತಿದ್ದ ಅನ್ನಭಾಗ್ಯದ ಅಕ್ಕಿಯನ್ನು ಮುಂದುವರೆಸಲಾಗುವುದು. ಯಾರು ಕೂಡ ರಾಜ್ಯದಲ್ಲಿ ಹಸಿವಿನಿಂದ ಬಳಲಿ ಸಾಯಬಾರದು ಎಂದಿದ್ದಾರೆ.
ಪ್ರತಿಯೊಬ್ಬರಿಗೂ ಅನ್ನ ಸಿಗುವ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದೆ. ಆದರೂ ಯೋಜನೆ ವಿರುದ್ಧ ಹಲವರು ವ್ಯಂಗ್ಯವಾಡುತ್ತಿದ್ದಾರೆ. ನಾನು ಸಿಎಂ ಆದಲ್ಲಿ ಮತ್ತೆ ಅನ್ನಭಾಗ್ಯದ ಯೋಜನೆ ಮುಂದುವರೆಸಲಾಗುವುದು ಎಂದಿದ್ದಾರೆ.