ಲಕ್ನೋ, ಸೆ.27 (DaijiworldNews/HR): "ಮುಸ್ಲಿಮರ ಸ್ಥಿತಿಯು ಮದುವೆಯ ಮೆರವಣಿಗೆಯಲ್ಲಿರುವ 'ಬ್ಯಾಂಡ್ ಬಾಜಾ ಪಾರ್ಟಿ'ಯಂತೆ ಮಾರ್ಪಟ್ಟಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮುಸ್ಲಿಮರ ಸ್ಥಿತಿಯು ಮದುವೆಯ ಮೆರವಣಿಗೆಯಲ್ಲಿರುವ 'ಬ್ಯಾಂಡ್ ಬಾಜಾ ಪಾರ್ಟಿ'ಯಂತೆ ಮಾರ್ಪಟ್ಟಿದ್ದು, ಮೊದಲು ಸಂಗೀತವನ್ನು ಕೇಳಿ ಬಳಿಕ ವಿವಾಹದ ಸ್ಥಳವನ್ನು ತಲುಪಿದಾಗ ಬ್ಯಾಂಡ್ ಬಾಜಾ ಪಾರ್ಟಿ ಅವರನ್ನು ಹೊರಗೆ ನಿಲ್ಲುವಂತೆ ಹೇಳುತ್ತಾರೆ. ಅಂತೆಯೇ ಉತ್ತರ ಪ್ರದೇಶದಲ್ಲಿ 19% ಜನಸಂಖ್ಯೆಯನ್ನು ಹೊಂದಿದ್ದರೂ ಮುಸ್ಲಿಮರಿಗೆ ಯಾವುದೇ ಪ್ರಾತಿನಿಧ್ಯವಿಲ್ಲ" ಎಂದರು.
ಇನ್ನು ಈಗ ಮುಸ್ಲಿಮರು ವಾದ್ಯವನ್ನು ನುಡಿಸುವುದಿಲ್ಲ. ಪ್ರತಿಯೊಂದು ಜಾತಿಯಲ್ಲೂ ಒಬ್ಬ ನಾಯಕನಿದ್ದಾನೆ, ಆದರೆ ಮುಸ್ಲಿಮರಿಗೆ ನಾಯಕನಿಲ್ಲ. ಯುಪಿಯಲ್ಲಿ 19% ಮುಸ್ಲಿಂ ಜನಸಂಖ್ಯೆ ಇದೆ ಆದರೆ ಒಬ್ಬ ನಾಯಕನೂ ಇಲ್ಲ ಎಂದಿದ್ದಾರೆ.
ಮುಸ್ಲಿಮರಲ್ಲಿ ನಾಯಕತ್ವವನ್ನು ಸೃಷ್ಟಿಸುವ ಭರವಸೆಯ ಮೇಲೆ ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಪಕ್ಷ - ಎಐಎಂಐಎಂ ಸ್ಪರ್ಧಿಸುವುದಾಗಿ ಒವೈಸಿ ಇತ್ತೀಚೆಗೆ ಘೋಷಿಸಿದ್ದಾರೆ. ಅವರ ಘೋಷಣೆಯು ರಾಜಕೀಯ ಪಕ್ಷಗಳಲ್ಲಿ ಅಸಮಾಧಾನವನ್ನು ಸೃಷ್ಟಿಸಿದೆ, ಇದುವರೆಗೂ ಮುಸ್ಲಿಮರನ್ನು ಅವರ ಪ್ರಮುಖ "ಮತ ಬ್ಯಾಂಕ್" ಎಂದು ಪರಿಗಣಿಸಿದೆ.