ಶಿಕಾರಿಪುರ, ಸೆ 27(DaijiworldNews/MS): ಶಿರಾಳಕೊಪ್ಪನಾನು ರಾಜೀನಾಮೆ ನೀಡಿದಾಗ ಪ್ರಧಾನಿ ಮೋದಿ ಅವರೇ ಆಶ್ಚರ್ಯ ವ್ಯಕ್ತಪಡಿಸಿದ್ದರು. ಯಾಕೆಂದರೆ ಒಬ್ಬ ಪುರಸಭೆ ಅಧ್ಯಕ್ಷ ರಾಜೀನಾಮೆ ಕೊಡಲು 10 ಬಾರಿ ಯೋಚನೆ ಮಾಡುತ್ತಾರೆ. ಹೀಗಿರುವಾಗ್ ನಾನು ಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ಒತ್ತಡ ಇಲ್ಲದಿರುವಾಗ ರಾಜೀನಾಮೆ ನೀಡಿದ್ದೇನೆ. ಪಕ್ಷದಲ್ಲಿ ಬೇರೆಯವರಿಗೂ ಅವಕಾಶ ಸಿಗಬೇಕು ಎಂಬ ಏಕೈಕ ಉದ್ದೇಶದಿಂದ ನೀಡಿದ್ದೇನೆ ರಾಜೀನಾಮೆ ನೀಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಶಿರಾಳಕೊಪ್ಪದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು ,ನನಗೆ ಯಾವುದೇ ಸ್ಥಾನಮಾನವಿಲ್ಲ. ಆದರೂ ಮುಂದಿನ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಪ್ರವಾಸ ಮಾಡಲಿದ್ದೇನೆ. ಪಕ್ಷಕ್ಕೆ 140ಕ್ಕಿಂತ ಹೆಚ್ಚು ಸ್ಥಾನವನ್ನು ಕೊಡಿಸುವ ಉದ್ದೇಶ ನನ್ನ ಮುಂದಿನ ಜವಬ್ದಾರಿ ಎಂದು ಹೇಳಿದರು.
ಕೋವಿಡ್ ಇರುವುದರಿಂದ ಪ್ರವಾಸದಲ್ಲಿ ಸಾವಿರಾರು ಜನರು ಸೇರಿ ಅನಾಹುತವಾಗಬಾರದು ಎಂದು ಸುಮ್ಮನಿದ್ದೇನೆ. ಇನ್ನು 15 ದಿನಗಳಲ್ಲಿ ರಾಜ್ಯ ಪ್ರವಾಸ ಮಾಡಲಿದ್ದೇನೆ ಎಂದರು.