ಹಾಸನ, ಸೆ.26 (DaijiworldNews/PY): "ನಾನು ಒಕ್ಕಲಿಗ ಸಮುದಾಯದಿಂದ ಬಂದಿದ್ದೇನೆ ಎನ್ನುವ ಕಾರಣದಿಂದ ನನ್ನನ್ನು ಮಂತ್ರಿ ಮಾಡಿದ್ದಾರೆ" ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಹಾಸನ ಜಿಲ್ಲಾ ಒಕ್ಕಲಿಗರ ಸಂಘದ ನೂತನ ಸಮುದಾಯ ಭವನದ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ನಾನು ಅಶೋಕ ಎಂದು ನನ್ನನ್ನು ಮಂತ್ರಿ ಮಾಡಲಿಲ್ಲ. ಬದಲಾಗಿ ನಾನು ಒಕ್ಕಲಿಗ ಸಮುದಾಯದಿಂದ ಬಂದಿದ್ದೇನೆ ಎಂದು ನನ್ನನ್ನು ಮಂತ್ರಿ ಮಾಡಿದ್ದಾರೆ. ಒಕ್ಕಲಿಗ ಸಮುದಾಯದಿಂದ ಬಂದಿದ್ದಕ್ಕೆ ನನಗೆ ಹೆಮ್ಮೆ ಇದೆ" ಎಂದಿದ್ದಾರೆ.
"ಅಧಿಕಾರ ಎನ್ನುವುದು ನೀರ ಮೇಲಿನ ಗುಳ್ಳೆ ಇದ್ದಂತೆ. ಧರ್ಮ ಸಿಂಗ್ ಅವರು ಸಿಎಂ ಆಗಿದ್ದ ಸಂದರ್ಭ, ಹತ್ತು ಹಿಂದೆ ಕಾರು, ಹತ್ತು ಮುಂದೆ ಕಾರಿನಲ್ಲಿ ಬಂದರು. ಆದರೆ, ಧರ್ಮಸಿಂಗ್ ಅವರು ಹೋಗುವಾಗ ಒಬ್ಬರೇ ಹೋದರು. ಅಧಿಕಾರ ಎಂದಿಗೂ ಶಾಶ್ವತವಲ್ಲ" ಎಂದು ಹೇಳಿದ್ದಾರೆ.
"ನಾವೆಲ್ಲರೂ ಜೊತೆಯಾಗಿ ಸಮಾಜವನ್ನು ಕಟ್ಟುವ, ಸಮಾಜಮುಖಿಯಾದ ಕೆಲಸ ಮಾಡಬೇಕು. ಆದಿಚುಂಚನಗಿರಿ ಮಠ ವಿದ್ಯಾರ್ಥಿಗಳಿಗೆ ವಿದ್ಯೆ ಸೇರಿದಂತೆ ಹಾಸ್ಟೆಲ್ ಹಾಗೂ ಹಲವಾರು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿದೆ. ಅವರಿಗೆ ನಾನು ಗೌರವ ಸಲ್ಲಿಸುತ್ತೇನೆ" ಎಂದು ತಿಳಿಸಿದ್ದಾರೆ.