ನವದೆಹಲಿ, ಸೆ.26 (DaijiworldNews/PY): "ದೇಶದಲ್ಲಿ ದ್ವೇಷದ ವಿಷವನ್ನು ಬಿತ್ತುತ್ತಿರುವಾಗ ಅಮೃತ ಮಹೋತ್ಸವಕ್ಕೆ ಎನ್ನುವುದಕ್ಕೆ ಅರ್ಥವಿದೆಯೇ?" ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಸ್ವಾತಂತ್ರ್ಯ ಎನ್ನುವುದು ಎಲ್ಲರಿಗೂ ಸಿಗದೇ ಇದ್ದಾಗ ಅದು ಎಂತಹ ಸ್ವಾತಂತ್ರ್ಯ?. ದೇಶದಲ್ಲಿ ದ್ವೇಷದ ವಿಷ ಹರಡುತ್ತಿರುವಾಗ ಅಮೃತಮಹೋತ್ಸವಕ್ಕೆ ಅರ್ಥವಿದೆಯೇ?" ಎಂದು ಕೇಳಿದ್ದಾರೆ.
"ಸರ್ಕಾರಿ ಜಮೀನು ಒತ್ತುವರಿಯ ವೇಳೆಅಸ್ಸಾಂನ ದರಂಗ್ ಜಿಲ್ಲೆಯಲ್ಲಿ ಪೊಲೀಸು ಭೂಮಿ ಕಬಳಿಸಿದ್ದಾರೆ ಎನ್ನಲಾಗಿರುವ ಆರೋಪಿಗಳ ನಡುವಿನ ಸಂಘರ್ಷದಿಂದ ಉದ್ಭವಿಸಿದ ಹಿಂಸಾಚಾರವನ್ನು ಗುರಿಯಾಗಿಸಿಕೊಂಡುರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದಾರೆ.
"ಟೀಕೆ, ಪ್ರತಿಪಕ್ಷಗಳ ವಿರೋಧ, ಸ್ಥಳೀಯರ ಆಕ್ರಂದನಗಳ ನಡುವೆಯೇ ಭೂ-ಒತ್ತುವರಿ ಕಾರ್ಯಾಚರಣೆಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ" ಎಂದು ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.