ಬೆಂಗಳೂರು, ಸೆ.26 (DaijiworldNews/PY): "ಬಂಗಾಳ ಕೊಲ್ಲಿಯ ಈಶಾನ್ಯ ಹಾಗೂ ಪೂರ್ವ ಮಧ್ಯಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಆದರೆ, ಚಂಡಮಾರುತದಿಂದ ರಾಜ್ಯದ ಮೇಲೆ ಯಾವುದೇ ಪರಿಣಾಮ ಉಂಟಾಗುವುದಿಲ್ಲ" ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
"ಚಂಡಮಾರುತದ ಪರಿಣಾಮ ಕರಾವಳಿ ಭಾಗದಲ್ಲಿ ಸ್ವಲ್ಪ ಮಳೆಯಾಗಬಹುದು. ಇದರಿಂದ ರಾಜ್ಯದ ಇತರೆಡೆಗೆ ಯಾವುದೇ ತೊಂದರೆ ಇಲ್ಲ. ಮೋಡ ಕವಿದ ವಾತಾವರಣ ಇರಲಿದೆ" ಎಂದಿದೆ.
"ಈ ಮಾರುತಗಳು ಪಶ್ಚಿಮ ದಿಕ್ಕಿಗೆ ಚಲಿಸಿ, ಆಂಧ್ರಪ್ರದೇಶದ ಉತ್ತರ ಭಾಗ ಹಾಗೂ ಒಡಿಶಾದ ದಕ್ಷಿಣ ಭಾಗದ ಕರಾವಳಿಯನ್ನು ದಾಟಬಹುದು. ವಿಶಾಖಪಟ್ಟಣಂ ಹಾಗೂ ಗೋಪಾಲಪುರ ಮಧ್ಯೆ ಕಳಿಂಗಪಟ್ಟಣಂ ಸುತ್ತ ಸೆ.26ರ ಭಾನುವಾರ ಚಂಡಮಾರುತ ಉಂಟಾಗುವ ಸಾಧ್ಯತೆ ಇದೆ" ಎಂದು ತಿಳಿಸಿದೆ.