ತಿರುವನಂತಪುರಂ, ಸೆ.25 (DaijiworldNews/PY): ರಾಜಕೀಯ ವ್ಯವಹಾರಗಳ ಸಮಿತಿಗೆ ಹಿರಿಯ ಕಾಂಗ್ರೆಸ್ ನಾಯಕ ವಿ ಎಂ ಸುಧೀರನ್ ಶನಿವಾರ ರಾಜೀನಾಮೆ ನೀಡಿದ್ದಾರೆ.
ಪಿಎಸಿ ಬದಲಾಗಿದೆ ಎಂದು ಸುಧೀರನ್ ಆರೋಪಿಸಿದ್ದಾರೆ. ಸಾಂಸ್ಥಿಕ ನವೀಕರಣದ ವಿಚಾರವಾಗಿ ತಮ್ಮ ಜೊತೆ ಮಾತುಕತೆ ನಡೆಸದಿದ್ದ ಕಾರಣಕ್ಕೆ ರಾಜ್ಯ ಕಾಂಗ್ರೆಸ್ ನಾಯಕತ್ವದೊಂದಿಗೆ ಸುಧೀರನ್ ಅವರು ಮುನಿಸಿಕೊಂಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಸನ್, "ಸುಧೀರನ್ ಅವರು ರಾಜೀನಾಮೆ ನೀಡಲು ತೀರ್ಮಾನಿಸಿರುವುದು ದುರದೃಷ್ಟಕರ. ಅವರೊಂದಿಗೆ ಮಾತುಕತೆ ನಡೆಸುತ್ತೇನೆ" ಎಂದಿದ್ದಾರೆ.
ಇಂದು ಸುಧೀರನ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಕಾಂಗ್ರೆಸ್ ಅಧ್ಯಕ್ಷ ಕೆ ಸುಧಾಕರನ್ ಅವರಿಗೆ ನೀಡಿದ್ದಾರೆ.