ಭುವನೇಶ್ವರ, ಸೆ.25 (DaijiworldNews/PY): "ಬಂಗಾಳ ಕೊಲ್ಲಿಯ ಈಶಾನ್ಯ ಹಾಗೂ ಪೂರ್ವ ಮಧ್ಯಭಾಗದಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ಒಡಿಶಾ ಹಾಗೂ ಆಂಧ್ರಪ್ರದೇಶದ ಕರಾವಳಿಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ" ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಪ್ರಾತಿನಿಧಿಕ ಚಿತ್ರ
"ಮುಂದಿನ 12 ಗಂಟೆಗಳಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಇದೆ. ಈ ಮಾರುತಗಳು ಪಶ್ಚಿಮ ದಿಕ್ಕಿಗೆ ಚಲಿಸಿ, ಆಂಧ್ರಪ್ರದೇಶದ ಉತ್ತರ ಭಾಗ ಹಾಗೂ ಒಡಿಶಾದ ದಕ್ಷಿಣ ಭಾಗದ ಕರಾವಳಿಯನ್ನು ದಾಟಬಹುದು. ವಿಶಾಖಪಟ್ಟಣಂ ಹಾಗೂ ಗೋಪಾಲಪುರ ಮಧ್ಯೆ ಕಳಿಂಗಪಟ್ಟಣಂ ಸುತ್ತ ಸೆ.26ರ ಭಾನುವಾರ ಚಂಡಮಾರುತ ಉಂಟಾಗುವ ಸಾಧ್ಯತೆ ಇದೆ" ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ.
ಗೋಪಾಲಪುರದ ಪೂರ್ವ-ಆಗ್ನೇಯ ದಿಕ್ಕಿನಲ್ಲಿ 510ಕಿ.ಮೀ ಹಾಗೂ ಆಂಧ್ರಪ್ರದೇಶದ ಕಳಿಂಗಪಟ್ಟಣದಿಂದ 590 ಕಿ.ಮೀ ದೂರದಲ್ಲಿ ಶನಿವಾರ ಮುಂಜಾನೆ ವಾಯುಭಾರ ಕುಸಿತ ತೀವ್ರವಾಗಿ ಕುಸಿತಗೊಂಡಿದೆ.