ಬೆಂಗಳೂರು, ಸೆ.25 (DaijiworldNews/PY): "ಬಿಜೆಪಿ ಗೌರವಾನ್ವಿತ ಸದನವನ್ನು ಮದುವೆ ಛತ್ರದಂತೆ ಭಾವಿಸಿದೆ. ಹೀಗೆಯೇ ಬಿಟ್ಟರೆ ಸದನದಲ್ಲಿ ಮದುವೆ, ಮುಂಜಿಯಂತಹ ಸಮಾರಂಭಗಳನ್ನ ಮಾಡಲೂ ಬಿಜೆಪಿ ಹಿಂಜರಿಯುವುದಿಲ್ಲ!" ಎಂದು ರಾಜ್ಯ ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್, "ಬಿಜೆಪಿ ಗೌರವಾನ್ವಿತ ಸದನವನ್ನು ಮದುವೆ ಛತ್ರದಂತೆ ಭಾವಿಸಿದೆ! ನಿಯಮಗಳನ್ನ ಸದನ ಸದಸ್ಯರಲ್ಲದವರನ್ನ ಕರೆಸಿ ಭಾಷಣ ಮಾಡಿಸಿ ಯಾವ ಘನ ಕಾರ್ಯ ಸಾಧಿಸಿದೆ ಬಿಜೆಪಿ? ಹೀಗೆಯೇ ಬಿಟ್ಟರೆ ಸದನದಲ್ಲಿ ಮದುವೆ, ಮುಂಜಿಯಂತಹ ಸಮಾರಂಭಗಳನ್ನ ಮಾಡಲೂ ಬಿಜೆಪಿ ಹಿಂಜರಿಯುವುದಿಲ್ಲ! ಪ್ರಜಾಪ್ರಭುತ್ವದ ಘನತೆ ಅರಿಯದವರಿಂದ ಇನ್ನೇನು ನಿರೀಕ್ಷಿಸಲಾದೀತು?" ಎಂದು ಪ್ರಶ್ನಿಸಿದೆ.
"ಸದನದ ಸದಸ್ಯರಲ್ಲದವರಿಗೆ ಪ್ರವೇಶವಿಲ್ಲದಿರುವಾಗ, ಓಂ ಬಿರ್ಲಾರನ್ನ ಯಾವ ನಿಯಮಗಳ ಅಡಿಯಲ್ಲಿ ಕರೆಸಲಾಯಿತು? ಅವರ ಭದ್ರತಾ ಸಿಬ್ಬಂದಿಗೆ ಸದನದೊಳಗೆ ಪ್ರವೇಶಿಸಲು ಅನುಮತಿ ನೀಡಿದವರಾರು? ಚರ್ಚೆ ನಡೆಸಬೇಕಾದಲ್ಲಿ ಸಮಾರಂಭ ನಡೆಸಿದ್ದೇಕೆ? ನಿರೂಪಕರನ್ನ ಸದನದೊಳಗೆ ಕರೆತಂದಿದ್ದೇಕೆ? ಮುಂದೆ ದಾರಿಹೋಕರನ್ನೂ ಸದನಕ್ಕೆ ಕರೆಸುವಿರಾ ಕಾಗೇರಿಯವರೆ?!" ಎಂದು ಕೇಳಿದೆ.