ನವದೆಹಲಿ, ಸೆ 25 (DaijiworldNews/MS): ಕಳೆದ ಎರಡು ದಿನಗಳಲ್ಲಿ ವಾಷಿಂಗ್ಟನ್ ಡಿಸಿಯಲ್ಲಿ ಮ್ಯಾರಥಾನ್ ಸಭೆಗಳನ್ನು ಭಾಗವಹಿಸಿದ ನಂತರ, ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಸಂಜೆ (ಸ್ಥಳೀಯ ಸಮಯ) ನ್ಯೂಯಾರ್ಕ್ ಗೆ ತೆರಳಿದರು, ಶನಿವಾರ ಅಲ್ಲಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (ಯುಎನ್ ಜಿಎ)ಯ 76 ನೇ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಶ್ವೇತಭವನದಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಅವರೊಂದಿಗೆ ಮೊದಲ ದ್ವಿಪಕ್ಷೀಯ ಸಭೆ ನಡೆಸಿದ ನಂತರ ಮತ್ತು ಶುಕ್ರವಾರ ಕೋವಿಡ್ -19 ರ ನಂತರ ನಡೆದ ಮೊದಲ ಬಾರಿ ಕ್ವಾಡ್ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಮೋದಿ ವಾಷಿಂಗ್ಟನ್ ನಿಂದ ನ್ಯೂಯಾರ್ಕ್ ಗೆ ಪ್ರಯಾಣಿಸಿದರು.
ಯುಎನ್ ಜಿಎಯ 76ನೇ ಅಧಿವೇಶನದ ಸಾಮಾನ್ಯ ಚರ್ಚೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ ಮಾಡಲಿದ್ದಾರೆ ಕೊರೊನಾ ವೈರಸ್ ಸಾಂಕ್ರಾಮಿಕ, ಭಯೋತ್ಪಾದನೆ ಮತ್ತು ಹವಾಮಾನ ಬದಲಾವಣೆ ಸೇರಿದಂತೆ ಇತರ ಪ್ರಮುಖ ವಿಷಯಗಳೊಂದಿಗೆ 'ಜಾಗತಿಕ ಸವಾಲುಗಳ ಮೇಲೆ' ಗಮನ ಹರಿಸಲಿದ್ದಾರೆ
ಇದಲ್ಲದೆ ಈ ವರ್ಷದ ವಿಷಯವೆಂದರೆ 'ಕೋವಿಡ್-19 ರಿಂದ ಚೇತರಿಸಿಕೊಳ್ಳುವ, ಸುಸ್ಥಿರವಾಗಿ ಪುನರ್ ನಿರ್ಮಿಸುವ, ಅಗತ್ಯಗಳಿಗೆ ಸ್ಪಂದಿಸುವ, ಜನರ ಹಕ್ಕುಗಳನ್ನು ಗೌರವಿಸುವ ಮತ್ತು ವಿಶ್ವಸಂಸ್ಥೆಯನ್ನು ಪುನರುಜ್ಜೀವನಗೊಳಿಸುವ ಭರವಸೆಯ ಮೂಲಕ ಸ್ಥಿತಿಸ್ಥಾಪಕತ್ವವನ್ನು ನಿರ್ಮಿಸುವುದುದಾಗಿದೆ.
ಅವರು ಕೊನೆಯದಾಗಿ 2019 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ್ದರು.