ಬೆಂಗಳೂರು, ಸೆ.24 (DaijiworldNews/HR): ರಾಜ್ಯದಲ್ಲಿಅಕ್ಟೋಬರ್ 1 ರಿಂದ ಕೊರೊನಾ ಪಾಸಿಟಿವಿಟಿ ದರ ಶೇ.1ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಶೇ.100ರಷ್ಟು ಚಿತ್ರಮಂದಿರಗಳ ಭರ್ತಿಗೆ ಅವಕಾಶ ನೀಡಲಾಗುತ್ತಿದ್ದು, ಅ. 3 ರಿಂದ ಪಬ್ಗಳನ್ನು ತೆರೆಯೋದಕ್ಕೆ ಅವಕಾಶ ಹಾಗೂ 6 ರಿಂದ 12ನೇ ತರಗತಿಗಳನ್ನು ಶೇ.100 ಆರಂಭಿಸದೋಕ್ಕೂ ಅವಕಾಶ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಕೊರೊನಾ ಪಾಸಿಟಿವಿ ಶೇ.1ಕ್ಕಿಂತ ಕಡಿಮೆ ಇರುವಂತ ಜಿಲ್ಲೆಗಳಲ್ಲಿ ಶೇ.100ರಷ್ಟು ಚಿತ್ರಮಂದಿರಗಳ ಭರ್ತಿಗೆ ಅವಕಾಶ ನೀಡಲಾಗುತ್ತಿದದು, ಅಕ್ಟೋಬರ್ 3ರಿಂದ ಪಬ್ಗಳನ್ನು ತೆರೆಯೋದಕ್ಕೆ ಅವಕಾಶ ನೀಡಲಾಗಿದೆ" ಎಂದರು.
ಇನ್ನು ರಾತ್ರಿ ಕರ್ಪ್ಯೂ ವೇಳೆಯನ್ನು ರಾತ್ರಿ 10 ರಿಂದ 5ಕ್ಕೆ ನಿಗದಿ ಪಡಿಸಲಾಗಿದ್ದು, ರಾಜ್ಯದಲ್ಲಿ 6 ರಿಂದ 12ನೇ ತರಗತಿಗಳಿಗೆ ಶೇ.100ರಷ್ಟು ಅವಕಾಶ ನೀಡಲಾಗುತ್ತಿದೆ. ಸೋಮವಾರದಿಂದ ಶುಕ್ರವಾರದವರೆಗೆ ತೆರೆಯೋದಕ್ಕೆ ಅವಕಾಶ ನೀಡಲಾಗಿದ್ದು, ದಸರಾ ಬಗ್ಗೆ ಆನಂತ್ರ ತೀರ್ಮಾನ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.