ಬೆಂಗಳೂರು, ಸೆ.24 (DaijiworldNews/PY): "ವಿದೇಶಿ ಗುಲಾಮಗಿರಿಯಲ್ಲಿ ವಿದ್ಯಾರ್ಥಿಗಳನ್ನು ಬಳಲಿಸುವುದೇ ಕಾಂಗ್ರೆಸ್ ನಾಯಕರ ಉದ್ದೇಶ. ಇವರಿಗೆ ಎಲ್ಲವೂ ವಿದೇಶೀ ಮೂಲದ್ದೇ ಆಗಬೇಕು, ತಮ್ಮ ರಾಷ್ಟ್ರೀಯ ಅಧ್ಯಕ್ಷರೂ ಕೂಡಾ!" ಎಂದು ರಾಜ್ಯ ಬಿಜೆಪಿ ಟೀಕಿಸಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ, "ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸುವ ಕಾಂಗ್ರೆಸ್ ಪಕ್ಷಕ್ಕೆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಿಂಚಿತ್ ಕಾಳಜಿ ಇಲ್ಲ. ವಿದೇಶಿ ಗುಲಾಮಗಿರಿಯಲ್ಲಿ ವಿದ್ಯಾರ್ಥಿಗಳನ್ನು ಬಳಲಿಸುವುದೇ ಕಾಂಗ್ರೆಸ್ ನಾಯಕರ ನಾಯಕರ ಉದ್ದೇಶ. ಇವರಿಗೆ ಎಲ್ಲವೂ ವಿದೇಶೀ ಮೂಲದ್ದೇ ಆಗಬೇಕು, ತಮ್ಮ ರಾಷ್ಟ್ರೀಯ ಅಧ್ಯಕ್ಷರೂ ಕೂಡಾ!" ಎಂದಿದೆ.
"ರಾಷ್ಟ್ರೀಯ ಶಿಕ್ಷಣ ನೀತಿ ಕರ್ನಾಟಕಕ್ಕೆ ಅವಶ್ಯಕತೆ ಇಲ್ಲ, ಹೈಕಮಾಂಡ್ ಮೆಚ್ಚಿಸಲು ಬಿಜೆಪಿ ಸರ್ಕಾರ ಎನ್ಇಪಿ ಜಾರಿಗೆ ಮುಂದಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆರೋಪಿಸಿದ್ದಾರೆ. ಹಾಗಾದರೆ, ನೀವಿದನ್ನು ವಿರೋಧಿಸುವುದು ನಿಮ್ಮ ಹೈಕಮಾಂಡ್ ಮೆಚ್ಚಿಸುವುದಕ್ಕಾಗಿಯೇ? ನಿಮಗಾಗಿ ಹೊಸದಾಗಿ ಇಟಲಿ ಶಿಕ್ಷಣ ನೀತಿ ರೂಪಿಸಬೇಕೇ?" ಎಂದು ಪ್ರಶ್ನಿಸಿದೆ.