ಬಲ್ಲಿಯಾ, ಸೆ.24 (DaijiworldNews/HR): "ರಾಮ, ಕೃಷ್ಣ ಮತ್ತು ಶಿವ ಭಾರತದ ಮುಸ್ಲಿಮರ ಪೂರ್ವಜರಾಗಿದ್ದು, ಈ ಸಮುದಾಯದವರು ಭಾರತೀಯ ಸಂಸ್ಕೃತಿಗೆ ತಲೆಬಾಗಬೇಕು" ಎಂದು ಉತ್ತರ ಪ್ರದೇಶ ಸರ್ಕಾರದ ಸಂಸದೀಯ ವ್ಯವಹಾರಗಳ ಸಚಿವ ಆನಂದ್ ಸ್ವರೂಪ್ ಶುಕ್ಲಾ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರಧಾನಿ ಮೋದಿ, ಯೋಗಿ ಆದಿತ್ಯನಾಥ್ ಅವರು ಭಾರತೀಯ ಸಂಸ್ಕೃತಿ ಮತ್ತು ಹಿಂದುತ್ವದ ಧ್ವಜವನ್ನು ಹಾರಿಸುವ ಮೂಲಕ ದೇಶದಲ್ಲಿ ಇಸ್ಲಾಮಿಕ್ ರಾಜ್ಯ ರಚಿಸಬೇಕೆಂಬ ಉದ್ದೇಶದ ಮನೋಭಾವದವರನ್ನು ಹಿಮ್ಮೆಟ್ಟಿಸಿದ್ದಾರೆ" ಎಂದರು.
ಇನ್ನು "ಶ್ರೀರಾಮ, ಕೃಷ್ಣ ಮತ್ತು ಶಿವ ಭಾರತದಲ್ಲಿರುವ ಮುಸ್ಲಿಮರ ಪೂರ್ವಜರು. ಆದ್ದರಿಂದ ಮುಸ್ಲಿಮರು ಭಾರತೀಯ ಸಂಸ್ಕೃತಿಗೆ ತಲೆಬಾಗಬೇಕು" ಎಂದಿದ್ದಾರೆ.
ಇತ್ತೀಚೆಗೆ ಸಂಭಾಲ್ನಲ್ಲಿ ಹಾಕಲಾಗಿದ್ದ ವಿವಾದಾತ್ಮಕ ಭಿತ್ತಿಪತ್ರವೊಂದರ ಕುರಿತು ಉಲ್ಲೇಖಿಸಿದ ಶುಕ್ಲಾ, "ಇದು ಸಮಾಜವಾದಿ ಪಕ್ಷದವರು ಇಸ್ಲಾಮಿಕ್ ಭಯೋತ್ಪಾದಕರನ್ನು ಬೆಂಬಲಿಸುತ್ತಿರುವ ಹಾಗೂ ಆ ಪಕ್ಷದ ಸಂಸದ ಶೈಫುರ್ ರಹಮಾನ್ ಅವರು ತಾಲಿಬಾನ್ ಬೆಂಬಲಿಸುವ ಹೇಳಿಕೆಗಳನ್ನು ನೀಡುತ್ತಿರುವುದರ ಪರಿಣಾಮ" ಎಂದು ಪ್ರತಿಪಾದಿಸಿದ್ದಾರೆ.