ನವದೆಹಲಿ, ಸೆ 24 (DaijiworldNews/MS): ದೆಹಲಿಯ ರೋಹಿಣಿ ನ್ಯಾಯಾಲಯದೊಳಗೆ ಶುಕ್ರವಾರ ನಡೆದ ಶೂಟೌಟ್ನಲ್ಲಿ, ಮೋಸ್ಟ್ ವಾಂಟೆಂಡ್ ಗ್ಯಾಂಗ್ ಸ್ಟಾರ್ ಜಿತೇಂದರ್ ಗೋಗಿ ಸೇರಿದಂತೆ ಮೂವರು ಹತ್ಯೆಯಾಗಿದ್ದಾರೆ.
ರೋಹಿಣಿ ನ್ಯಾಯಾಲಯದಲ್ಲಿ ಗೋಗಿಯನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವಾಗ ವಕೀಲರ ವೇಷಭೂಷಣದಲ್ಲಿದ್ದ ಇಬ್ಬರು ಗುಂಡಿನ ದಾಳಿ ನಡೆಸಿದ್ದಾರೆ . ಈ ವೇಳೆ ನಡೆದ ಪ್ರತಿದಾಳಿಯಲ್ಲಿ ದಾಳಿಕೋರರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ ಎಂದು ದೆಹಲಿ ಪೊಲೀಸ್ ವಿಶೇಷ ಘಟಕ ಹೇಳಿದೆ.
ದೆಹಲಿ ಪೊಲೀಸರ ವಿಶೇಷ ಕೋಶವು ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಎಂಸಿಒಸಿಎ) ಅಡಿಯಲ್ಲಿ ಗೋಗಿಯನ್ನು ಏಪ್ರಿಲ್ ನಲ್ಲಿ ಬಂಧಿಸಿತ್ತು.