ಭೋಪಾಲ್, ಸೆ.24 (DaijiworldNews/HR): ಮಧ್ಯ ಪ್ರದೇಶದ ದೇವಾಸ್ ಜಿಲ್ಲೆಯ 90 ವರ್ಷದ ವೃದ್ಧೆಯೊಬ್ಬರು ವೃದ್ಧೆ ಕಾರು ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ದೇವಾಸ್ ಜಿಲ್ಲೆಯ ಬಿಲವಾಲಿ ಪ್ರದೇಶದ ನಿವಾಸಿಯಾಗಿರುವ ರೇಷಮ್ ಬಾಯ್ ತನ್ವರ್ ಎಂಬ ವೃದ್ಧೆ 90ನೇ ವಯಸ್ಸಿನಲ್ಲಿ ಕಾರು ಓಡಿಸುವುದನ್ನು ಕಲಿತುಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ವೃದ್ದೆ, "ನನಗೆ ಡ್ರೈವಿಂಗ್ ಮಾಡುವುದೆಂದರೆ ತುಂಬಾ ಸಂತೋಷ. ನಾನು ಕಾರು ಮಾತ್ರವಲ್ಲದೆ ಟ್ರ್ಯಾಕ್ಟರ್ಗಳನ್ನು ಕೂಡ ಓಡಿಸುತ್ತೇನೆ" ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇನ್ನು ಅಜ್ಜಿಯ ಹುಮ್ಮಸ್ಸಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಟ್ವೀಟ್ ಮಾಡಿ ಅಭಿನಂದಿಸಿದ್ದಾರೆ. ಈ ವಯಸ್ಸಿನಲ್ಲಿ ಡ್ರೈವಿಂಗ್ ಕಲಿತಿರುವ ಅವರು ಎಲ್ಲರಿಗೂ ಸ್ಫೂರ್ತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.