ಮೈಸೂರು, ಸೆ.24 (DaijiworldNews/PY): "ಜನರಿಗೆ ಮೋಸ ಮಾಡಿ, ಮರುಳು ಮಾಡಿ ಮತಾಂತರ ಮಾಡುವುದು ನಿಷೇಧ ಆಗಬೇಕು" ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರಿನಲ್ಲಿ 101 ಗಣಪತಿ ದೇಗುಲದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ನಾನು ಮತಾಂತರ ವಿರೋಧಿ. ನಾನು ಪತ್ರಕರ್ತನಾಗಿದ್ದ ಸಂದರ್ಭ ಈ ಕುರಿತು ಬರೆದಿದ್ದೆ. ಮತಾಂತರ ಮಾಡುತ್ತಿದ್ದವರಿಗೆ ಆತಂಕ ಇರುತ್ತದೆ. ಪಾದ್ರಿಗಳಿಗೆ ಏಕೆ ಈ ಚಡಪಡಿಕೆ, ಆತಂಕ. ಏಕಾಏಕಿ ಏಕೆ ಹೋಗಿ ಸಿಎಂ ಅವರಿಗೆ ಮನವಿ ಮಾಡಿದ್ದಾರೆ" ಎಂದು ಪ್ರಶ್ನಿಸಿದ್ದಾರೆ.
"ಗೂಳಿಹಟ್ಟಿ ಶೇಖರ್ ಓರ್ವ ಜನಪ್ರತಿನಿಧಿಯಾಗಿದ್ದು, ಅವರ ತಾಯಿಯೇ ಮತಾಂತರಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ. ಮೊದಲು ಮತಾಂತರ ನಿಷೇಧವಾಗಬೇಕು" ಎಂದಿದ್ಧಾರೆ.
"ಜನರನ್ನು ಏಕೆ ಮರಳು ಮಾಡುತ್ತಿದ್ದಾರೆ ಎಂದು ತಿಳಿಯುತ್ತಿಲ್ಲ. ಚಿಕಿತ್ಸೆ ನೀಡಬೇಕು ಎಂದು ಮೊದಲು ಏಸು ಸ್ವಾಮಿಗೆ ಪೂಜೆ ಮಾಡಿ ಎನ್ನುತ್ತಾರೆ. ಚಿಕಿತ್ಸೆ ನೀಡಿದ ಬಳಿ ಏಸು ಕಾಪಾಡಿದ್ದು ಎಂದು ಹೇಳುತ್ತೀರಿ. ಹೀಗೆ ಮರಳು ಮಾಡಿ ಮತಾಂತರ ಮಾಡುವ ಕೆಲಸ ನಡೆದಿದೆ" ಎಂದು ಹೇಳಿದ್ದಾರೆ.
"ನಾವು ಗಣೇಶನ ಬಳಿ ಬಂದು ಪ್ರಾರ್ಥನೆ ಸಲ್ಲಿಸಿದ್ದೆವು. ಇಂದು ನಮ್ಮ ಬೇಡಿಕೆ ನೆರವೇರಿದೆ. ನಮಗೆ ಉತ್ತಮವಾದ ಸಿಎಂ ಸಿಕ್ಕಿದ್ದಾರೆ. ವಿಧೇಯಕವನ್ನು ಮಂಡಿಸಿ ವಿಧೇಯಕವನ್ನು ಪಾಸ್ ಮಾಡಿಸಿದ್ದು, ನಮ್ಮ ದೇವಾಲಯಗಳ ರಕ್ಷಣೆಗೆ ನೂತನ ಕಾಯ್ದೆ ಸಿಕ್ಕಿದೆ" ಎಂದಿದ್ದಾರೆ.