ಬೆಂಗಳೂರು, ಸೆ.24 (DaijiworldNews/HR): ರಾಜ್ಯದ ಜನರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದು, ಬಿಜೆಪಿ ಸರ್ಕಾರ ಜನರ ರಕ್ತ ಕುಡಿಯುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರುತು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, "ದೇಶದಾದ್ಯಂತ ಬೆಲೆ ಏರಿಕೆಯಿಂದ ಜನರು ಕಂಗಲಾಗಿದ್ದು, ಕೇಂದ್ರ ಸರ್ಕಾರ ಪ್ರತಿಯೊಬ್ಬರ ಜೇಬಿಗೂ ಕೈ ಹಾಕಿದೆ. ಮೋದಿ, ಬೊಮ್ಮಾಯಿ ಸರ್ಕಾರಗಳು ದಪ್ಪ ಚರ್ಮದ ಸರ್ಕಾರ, ಅವರು ಜನರ ಪರವಾಗಿಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು "ಬೆಲೆ ಏರಿಕೆಯಿಂದಾಗಿ ಪ್ರತಿಯೊಬ್ಬರ ಮನೆಗೆ ಬೆಂಕಿ ಬಿದಿದೆ. ಬಿಜೆಪಿಯದ್ದು ಜನರೋಧಿ ಸರ್ಕಾರ, ಕಾರ್ಪೋರೇಟ್ ಪರವಾಗಿ ಬಿಜೆಪಿ ಸರ್ಕಾರ ಕೆಲಸ ಮಾಡುತ್ತಿದೆ. ಬಿಜೆಪಿಯಿಂದ ನಾವು ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ" ಎಂದು ಹೇಳಿದ್ದಾರೆ.