ಬೆಂಗಳೂರು, ಸ.23 (DaijiworldNews/HR): "ಕಾಂಗ್ರೆಸ್ ಯಾವಾಗಲೂ ಜಾತಿ ಲೆಕ್ಕದಲ್ಲಿ ರಾಜಕಾರಣ ಮಾಡುತ್ತ ಬಂದಿದ್ದು, ಜಾತಿ ವಿಭಜನೆ ಮಾಡಲು ಹೋಗಿ ಈ ಸ್ಥಿತಿಗೆ ಬಂದಿದ್ದಾರೆ. ನಮ್ಮದು ಧರ್ಮ ರಾಜಕಾರಣವೆಂದು ಒಪ್ಪಿಕೊಳ್ಳುತ್ತೇನೆ. ಆದರೆ ಬಿಜೆಪಿಯದ್ದು ಜಾತಿ ಇಲ್ಲದ ರಾಜಕಾರಣ" ಎಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ನವರು ಐದು ವರ್ಷ ಮಲಗಿರುತ್ತಾರೆ. ಯುದ್ಧ ಕಾಲದಲ್ಲಿ ಹೋರಾಟ ಮಾಡುತ್ತಾರೆ. ನಮ್ಮ ರಾಜ್ಯಾಧ್ಯಕ್ಷರು ಈಗಾಗಲೇ ಹದಿನೈದು ಬಾರಿ ರಾಜ್ಯ ಪ್ರವಾಸ ಮಾಡಿದ್ದಾರೆ" ಎಂದರು.
"ಜೆಡಿಎಸ್ ನವರನ್ನು ಕಾಂಗ್ರೆಸ್ ಪಕ್ಷವು ಅರ್ಧದಾರಿಯಲ್ಲಿ ಬಿಟ್ಟು ಹೋಗಿದ್ದು, ಜನರಿಗೆ ಅವರ ಬಗ್ಗೆ ಜನರಿಗೆ ಭಯ ಇದೆ. ದೊಡ್ಡಬಳ್ಳಾಪುರದಲ್ಲಿ ಬಿಜೆಪಿಯವರು ಅಧ್ಯಕ್ಷರಾಗಲಿದ್ದಾರೆ. ಕಲಬುರ್ಗಿಯಲ್ಲಿ ನಮ್ಮ ಶಕ್ತಿ ಹೆಚ್ಚಾಗಿದೆ. ಕುಮಾರಸ್ವಾಮಿ ಹಾಗೂ ರೇವಣ್ಣ ಜೊತೆ ಮಾತನಾಡಿದ್ದೇನೆ" ಎಂದಿದ್ದಾರೆ.
ಇನ್ನು ರಾಜ್ಯದಲ್ಲಿ ಕೊರೊನಾದಿಂದ ಸಾವಿರಾರು ಜನರು ಮೃತಪಟ್ಟಿದ್ದು, ಕೆಲವರು ಮಕ್ಕಳನ್ನು, ಮನೆಯ ಯಜಮಾನನನ್ನು ಕಳೆದುಕೊಂಡಿದೆ. ಹಿಂದೆ ಯಡಿಯೂರಪ್ಪ ನೇತೃತ್ವದ ಸರ್ಕಾರ ಕೊರೊನಾದಿಂದ ಮೃತರಾದವರ ಕುಟುಂಬದವರಿಗೆ ಬಿಪಿಎಲ್ ಕುಟುಂಬಕ್ಕೆ ಒಂದು ಲಕ್ಷ ರೂ. ಪರಿಹಾರ ನೀಡುವ ಯೋಜನೆಗೆ ಚಾಲನೆ 7729 ಅರ್ಜಿಗಳು ಸ್ವೀಕೃತವಾಗಿವೆ" ಎಂದು ಹೇಳಿದ್ದಾರೆ.