ಪಂಜಾಬ್, ಸೆ 23 (DaijiworldNews/MS): ಶಾಸಕರ ಬಂಡಾಯದ ನೆರಳಲ್ಲಿ ರಾಜೀನಾಮೆ ನೀಡಿದ ಪಂಜಾಬ್ನ ನಿಕಟಪೂರ್ವ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ತಮ್ಮ ಮುಂದಿನ ರಾಜಕೀಯ ಪ್ರಯಾಣದ ಬಗ್ಗೆ ಇನ್ನೂ ಯಾವುದೇ ಮಾಹಿತಿ ನೀಡಿಲ್ಲ. ಆದರೆ, ಪಿಪಿಸಿಸಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಅವರನ್ನು ಪಕ್ಷವು ಮುಂದಿನ ಸಿಎಂ ಆಗಿ ಬಿಂಬಿಸಿದಲ್ಲಿ ಅವರ ವಿರುದ್ಧ ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿಯನ್ನು ಇಳಿಸುವುದಾಗಿ ಎಚ್ಚರಿಸಿದ್ದಾರೆ.
ಸಿಧು ವಿರುದ್ಧ ಹರಿಹಾಯ್ದಿರುವ ಕ್ಯಾಪ್ಟನ್, ಪಿಸಿಸಿ ಮುಖ್ಯಸ್ಥರು ಪಕ್ಷದ ವ್ಯವಹಾರಗಳ ಮೇಲೆ ಗಮನ ಹರಿಸಬೇಕು. ಅವರು 'ಸೂಪರ್ ಸಿಎಂ' ಆಗಿ ವರ್ತಿಸಿದರೆ, ಪಕ್ಷ ಕಾರ್ಯ ನಿರ್ವಹಿಸುವುದಿಲ್ಲ ಎಂದಿದ್ದಾರೆ. ಜೊತೆಗೇ, ಸಿಧು ಅವರತ್ತಲೇ ಬೆಟ್ಟು ಮಾಡುತ್ತಾ, 'ಈ ಡ್ರಾಮಾ ಮಾಸ್ಟರ್ ನಾಯಕತ್ವದಲ್ಲಿ ಕಾಂಗ್ರೆಸ್ ಪಂಜಾಬ್ ಚುನಾವಣೆಗಳಲ್ಲಿ ಎರಡಂಕಿಯನ್ನೂ ತಲುಪುವುದು ಕಷ್ಟವಾದೀತು' ಎಂದು ಅಭಿಪ್ರಾಯಪಟ್ಟಿದ್ದಾರೆ
ಮೊದಲ ದಲಿತ ಸಿಎಂ ಆದ ಚನ್ನಿ ಬಗ್ಗೆ ಪ್ರತಿಕ್ರಿಯಿಸಿ. " ಎಲ್ಲರೂ ಸಮಾನರು ಎಂದು ನಮ್ಮ ಧರ್ಮಗಳು ನಮಗೆ ಕಲಿಸುತ್ತವೆ. ನಾನು ಜನರನ್ನು ಅವರ ಜಾತಿಯ ಆಧಾರದ ಮೇಲೆ ನೋಡುವುದಿಲ್ಲ, ಅವರ ದಕ್ಷತೆ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ.
"ನಾನು ಉತ್ತಮ ಪಿಪಿಸಿಸಿ ಅಧ್ಯಕ್ಷರನ್ನು ಹೊಂದಿದ್ದೆ, ನಾನು ಅವರ ಸಲಹೆಯನ್ನು ಪಡೆದುಕೊಂಡೆ, ಆದರೆ ಸರ್ಕಾರವನ್ನು ಹೇಗೆ ನಡೆಸಬೇಕೆಂದು ಅವರು ಎಂದಿಗೂ ನನಗೆ ಹೇಳಲಿಲ್ಲ, ಹೀಗಾಗಿ ಪಿಸಿಸಿ ಮುಖ್ಯಸ್ಥರು ಪಕ್ಷದ ವ್ಯವಹಾರಗಳ ಮೇಲೆ ಗಮನ ಹರಿಸಬೇಕು. ಅವರು 'ಸೂಪರ್ ಸಿಎಂ' ಆಗಿ ವರ್ತಿಸಿದರೆ, ಪಕ್ಷ ಕಾರ್ಯ ನಿರ್ವಹಿಸುವುದಿಲ್ಲ ಎಂದು ಸಿಧು ವಿರುದ್ದ ್ ಅಮರೀಂದರ್ ವಾಗ್ದಾಳಿ ನಡೆಸಿದರು.
ಸಿದ್ದು ಅವರ ಬಗ್ಗೆ ಅಸಮಾಧಾನದ ಮಾತುಗಳನ್ನಾಡಿದ ಅವರು "ಡ್ರಾಮಾ ಮಾಸ್ಟರ್ ನಾಯಕತ್ವ" ದ ನಾಯಕತ್ವದಲ್ಲಿ ಚುನಾವಣೆಗೆ ಸ್ಪರ್ಧಿಸಿದರೆ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಎರಡು ಅಂಕಿಗಳನ್ನು ಸ್ಪರ್ಶಿಸಲೂ ಸಾಧ್ಯವಿಲ್ಲ ಎಂದು ಕಾಂಗ್ರೆಸ್ಗೆ ಎಚ್ಚರಿಕೆ ನೀಡಿದರು.