ನವದೆಹಲಿ, ಸ.23 (DaijiworldNews/HR): 2028ರ ವೇಳೆಗೆ ಎರಡೂ ಧರ್ಮದ ಜನಸಂಖ್ಯೆ ಒಂದೇ ಆಗಲಿದ್ದು, ಆಗ ದೇಶದ ಜನಸಂಖ್ಯೆ ಸ್ಥಿರಗೊಳ್ಳುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸದ್ಯ ಅಧ್ಯಯನವೊಂದರ ವರದಿ ಓದಿದ್ದು, ಇದು ಜನಗಣತಿ ದತ್ತಾಂಶವನ್ನು ಆಧರಿಸಿದೆ. 1951 ರ ನಂತ್ರ ಮುಸ್ಲಿಮರ ಫಲವತ್ತತೆ ದರವು ಇಳಿದಿದೆ. ಈ ಹಿಂದೆ ಈ ದರ ಹಿಂದುಗಳಿಗಿಂತ ಹೆಚ್ಚಿತ್ತು. ದೇಶದಲ್ಲಿ ಪ್ರಸ್ತುತ ಮುಸ್ಲಿಮರ ಫಲವತ್ತತೆ ದರವು ಶೇಕಡಾ 2.7 ರಷ್ಟಿದ್ದು, ಹಿಂದೂಗಳ ಈ ಪ್ರಮಾಣವು ಶೇಕಡಾ 2.3 ರಷ್ಟಿದೆ ಎಂದು ವರದಿಯಲ್ಲಿ ಹೇಳಲಾಗಿದೆ" ಎಂದರು.
ಇನ್ನು ವರದಿಯ ಪ್ರಕಾರ, 2028 ರ ಹೊತ್ತಿಗೆ, ಹಿಂದುಗಳು ಮತ್ತು ಮುಸ್ಲಿಮರ ಜನಸಂಖ್ಯೆ ಬಹುತೇಕ ಒಂದೇ ಆಗಲಿದೆ ಎಂದಿದ್ದಾರೆ.
ಕೆಲವರು 10 ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆಯು ಹಿಂದೂಗಳಿಗಿಂತ ಹೆಚ್ಚಾಗುತ್ತದೆ ಎಂದು ಸುಳ್ಳು ವದಂತಿ ಹಬ್ಬಿಸುತ್ತಿದ್ದು, ಇದು ಜನರನ್ನು ದಾರಿ ತಪ್ಪಿಸುವ ಕೆಲಸವಾಗಿದೆ ಎಂದು ಹೇಳಿದ್ದಾರೆ.