ಬೆಂಗಳೂರು, ಸೆ 23(DaijiworldNews/MS): ರಾಜ್ಯದಲ್ಲಿ ಬಲವಂತದ ಹಾಗೂ ಆಮಿಷವೊಡ್ಡಿ ಮತಾಂತರ ನಡೆಸುತ್ತಿರುವ ಪ್ರಕರಣಗಳು ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಮತಾಂತರ ನಿಷೇಧಕ್ಕೆ ಕಾಯ್ದೆ ತರಲು ರಾಜ್ಯ ಸರ್ಕಾರ ಚಿಂತಿಸುತ್ತಿರುವಾಗ ಅಂತಹ ಕ್ರಮದ ವಿರುದ್ಧ ಅಭಿಪ್ರಾಯ ಹೊರಹೊಮ್ಮುತ್ತಿದೆ.
ಬೆಂಗಳೂರಿನ ಆರ್ಚ್ ಬಿಷಪ್ ಡಾ ಪೀಟರ್ ಮಚಾಡೊ ನೇತೃತ್ವದ ಧರ್ಮಗುರುಗಳ ನಿಯೋಗವು ಸೆ. 22ರ ಬುಧವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚಿಸಿತು.
ವಿಧಾನಸೌಧದ ಮೂರನೇ ಮಹಡಿಯ ಮುಖ್ಯಮಂತ್ರಿಗಳ ಕಚೇರಿಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ ನಿಯೋಗ, "ಶಾಸಕ ಗೂಳಿಹಟ್ಟಿ ಶೇಖರ್ ಮಾಡಿರುವ ಮತಾಂತರ ಆರೋಪಕ್ಕೆ ಬೇಸರ ವ್ಯಕ್ತಪಡಿಸಿತು.
ಮಾಜಿ ಮಂತ್ರಿ ಗೂಳಿಹಟ್ಟಿ ಶೇಖರ್ ಅವರು ಕ್ರೈಸ್ತ್ರರು ಬಲವಂತದ ಧಾರ್ಮಿಕ ಮತಾಂತರದ ಮಾಡುತ್ತಿದ್ದಾರೆ ಎಂಬ ಆರೋಪಗಳಿಗೆ ಧರ್ಮಗುರುಗಳ ನಿಯೋಗ ಅತೃಪ್ತಿಯನ್ನು ವ್ಯಕ್ತಪಡಿಸಿದತು. ಈ ಆರೋಪವನ್ನು ಬಲವಾಗಿ ನಿರಾಕರಿಸಿದ್ದು, ಕ್ರಿಶ್ಚಿಯನ್ ಧರ್ಮದಲ್ಲಿ ಯಾವುದೇ ಬಲವಂತದ ಮತಾಂತರಗಳು ನಡೆಯುತ್ತಿಲ್ಲ ಎಂದು ಒತ್ತಿ ಹೇಳಿದರು
ಆರ್ಚ್ ಬಿಷಪ್ ಡಾ.ಪೀಟರ್ ಮಚಾಡೋ, ಮಾತನಾಡಿ , " ಮತಾಂತರದ ವಿಷಯ ಸುಳ್ಳು. ಪ್ರತಿಯೊಬ್ಬ ಧರ್ಮಧ್ಯಕ್ಷರ ಹೆಸರಲ್ಲಿ ನೂರಾರು ಶಾಲಾ, ಕಾಲೇಜು, ಆಸ್ಪತ್ರೆಗಳಿವೆ. ಒಂದು ಲಕ್ಷಕ್ಕಿಂತ ಹೆಚ್ಚಾಗಿ ಮಕ್ಕಳಿದ್ದಾರೆ. ಯಾರೇ ಒಬ್ಬರಿಗೂ ಮತಾಂತರ ಮಾಡಲು ನಾವು ಹೇಳಿಲ್ಲ. ಅಪ್ಪಿತಪ್ಪಿ ಸಣ್ಣ ಘಟನೆಯಾಗಿದ್ದು ದೊಡ್ಡ ವಿಷಯ ಮಾಡೋದು ಸರಿಯಲ್ಲ ಎಂದು ತಿಳಿಸಿದರು.
ನಮ್ಮ ಅಭಿಪ್ರಾಯ ಆಲಿಸಿದ ಬಳಿಕ ಸಿಎಂ, ನೀವ್ಯಾರು ಹಾಗಿಲ್ಲ ಆದರೆ ಯಾರೋ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ವಿಚಾರ ಸದನದಲ್ಲಿ ಚರ್ಚೆಯಾಗುತ್ತಿದೆ, ಚರ್ಚೆ ಯಾಗಲಿ ಎಂದು ಹೇಳಿದರು.