ನವದೆಹಲಿ, ಸೆ 22 (DaijiworldNews/MS): ಕೊವೀಡ್ ಲಸಿಕೆ ಕೋವಿಶೀಲ್ಡ್ ಗೆ ಬ್ರಿಟನ್ ಮಾನ್ಯತೆ ನೀಡಿದ್ದು, ಯುಕೆ ಪರಿಷ್ಕೃತ ಮಾರ್ಗಸೂಚಿಗಳ ಮೇಲೆ ಕೋವಿಶೀಲ್ಡ್ ಅನುಮೋದಿತ ಲಸಿಕೆಯ ಪಟ್ಟಿಗೆ ಸೇರಿಸಿದೆ.
ಭಾರತ ಸರ್ಕಾರದ ತಿರುಗೇಟು ಕ್ರಮದ ಉಗ್ರ ಎಚ್ಚರಿಕೆಯ ಬಳಿಕ, ಎಚ್ಚೆತ್ತುಕೊಂಡಿರುವ ಬ್ರಿಟೀಷ್ ಸರ್ಕಾರ ಈ ಕ್ರಮ ತೆಗೆದುಕೊಂಡಿದೆ. ಆದಾಗ್ಯೂ, ಕೋವಿಶೀಲ್ಡ್ 'ಅನುಮೋದಿತ ಲಿಸ್ಟ್'ಗೆ ಸೇರಿಸಲಾಗಿದ್ದರೂ ಸಹ, ಕೋವಿಶೀಲ್ಡ್ನ ಎರಡು ಡೋಸ್ ಪಡೆದ ಭಾರತೀಯರು' ಲಸಿಕೆ ಪ್ರಮಾಣೀಕರಣ'ದ ಸಮಸ್ಯೆಯಿಂದಾಗಿ ಯುಕೆಯಲ್ಲಿ 10 ದಿನಗಳ ಕಾಲ ಕ್ವಾರಂಟೈನ್ ಮಾಡಬೇಕಾಗುತ್ತದೆ ಎಂದು ತಿಳಿಸಿದೆ.
ಕೊವಿಶೀಲ್ಡ್ ಲಸಿಕೆಯ ಸಮಸ್ಯೆ ಅಲ್ಲ, ಆದರೆ ಭಾರತದಲ್ಲಿ ಲಸಿಕೆ ಪ್ರಮಾಣೀಕರಣದ ಬಗ್ಗೆ ಅನುಮಾನವಿದೆ ಎಂದು ಅಲ್ಲಿನ ಅಧಿಕಾರಿಗಳಿಗೆ ಹೇಳಿದ್ದಾರೆ. ಭಾರತದಲ್ಲಿ ಕೋವಿಡ್ ಜಬ್ಸ್ ನಂತರ ಪ್ರಮಾಣೀಕರಣವು ಕೋವಿನ್ ಆಪ್ ಮತ್ತು ಪೋರ್ಟಲ್ ಮೂಲಕ ನಿರ್ವಹಿಸಲ್ಪಡುವ ಕೇಂದ್ರೀಕೃತ ರಾಷ್ಟ್ರೀಯ ವ್ಯವಸ್ಥೆಯಾಗಿದೆ.
ಭಾರತವು ಈ ಮೊದಲು ಯುಕೆ ಕೋವಿಶೀಲ್ಡ್ ಲಸಿಕೆಯನ್ನು ಗುರುತಿಸದಿರುವುದನ್ನು ವಿರೋಧಿಸಿತ್ತು ಮತ್ತು ತಾರತಮ್ಯವನ್ನು ತಿದ್ದುಪಡಿ ಮಾಡದಿದ್ದರೆ 'ಪರಸ್ಪರ ಕ್ರಮಗಳ' ಬಗ್ಗೆ ಎಚ್ಚರಿಕೆ ನೀಡಿತ್ತು.