ಬೆಂಗಳೂರು, ಸೆ 22 (DaijiworldNews/MS): ಬೆಂಗಳೂರಿನ ದೇವರಚಿಕ್ಕನಹಳ್ಳಿ ಬಳಿಯ ಆಶ್ರಿತ ಅಪಾರ್ಟ್ಮೆಂಟ್ನಲ್ಲಿ ನಡೆದ ಅಗ್ನಿದುರಂತ ಪ್ರಕರಣದಲ್ಲಿ ತಾಯಿ - ಮಗಳು ಸಜೀವ ದಹನವಾಗಿದ್ದ ಘಟನೆಗೆ ಸಿಲಿಂಡರ್ ಬ್ಲಾಸ್ಟ್ ಆಗಿದ್ದೇ ಕಾರಣ ಎಂದು ಅಂದಾಜಿಸಲಾಗಿತ್ತು. ಆದರೆ ಫ್ಲಾಟ್ನಲ್ಲಿದ್ದ ಎರಡೂ ಸಿಲಿಂಡರ್ ಗಳು ಸರಿಯಾಗಿಯೇ ಇವೆ ಎಂಬುವುದು ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆ ವೇಳೆ ಗ್ಯಾಸ್ನಿಂದ ಬೆಂಕಿ ಹೊತ್ತಿಲ್ಲ ಎಂಬುದು ಬೆಳಕಿಗೆ ಬಂದಿದೆ. ಹೀಗಾಗಿ ಯುಪಿಎಸ್, ಮೊಬೈಲ್ ಚಾರ್ಜಿಂಗ್, ಮೇಲೆ ಅನುಮಾನ ವ್ಯಕ್ತವಾಗುತ್ತಿದೆ.
ಈ ವಿಚಾರವಾಗಿ ಮಾತನಾಡಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಈ ಘಟನೆ ಕಣ್ತೆರೆಯುವಂತೆ ಮಾಡಿದೆ. ದುರಂತವೂ ಸಿಲಿಂಡರ್ ಬ್ಲಾಸ್ಟ್ನಿಂದ ಸಂಭವಿಸಿಲ್ಲ ದುರಂತಕ್ಕೆ ನಿಖರ ಕಾರಣ ಏನು ಅನ್ನೋದ್ರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಈ ಭೀಕರ ದುರಂತಕ್ಕೆ ಅಪಾರ್ಟ್ಮೆಂಟ್ನ ನಿರ್ಲಕ್ಷವೇ ಕಾರಣವಾಯಿತಾ ಎಂಬ ಪ್ರಶ್ನೆ ಮೂಡಿದೆ. ಅಪಾರ್ಟ್ಮೆಂಟ್ನ ಮುಂದೆ ರಸ್ತೆ ಕೂಡ ಸರಿಯಾಗಿರಲಿಲ್ಲ ಅಗ್ನಿಶಾಮಕ ದಳ ವಾಹನಕ್ಕೆ ಸರಿಯಾದ ಸಮಯಕ್ಕೆ ಸ್ಥಳಕ್ಕೆ ತಲುಪಲು ಸಾಧ್ಯವಾಗಿರಲಿಲ್ಲ. ಬಿಬಿಎಂಪಿ ಹಾಗೂ ಅಪಾರ್ಟ್ಮೆಂಟ್ನ ಮಾಲೀಕರ ನಿರ್ಲಕ್ಷವೇ ಕಾರಣ ಎಂದು ಹೇಳಲಾಗುತ್ತಿದೆ. ಯಾವುದೇ ಸೇಫ್ಟಿ ಮೆಶರ್ಸ್ ಇಲ್ಲದಿರುವುದೇ ಈ ದುರಂತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.